ಸಾಮಾನ್ಯವಾಗಿ ಒಬ್ಬ ಮನುಷ್ಯ ತನ್ನ 60 ನೇ ವಯಸ್ಸಿನಲ್ಲಿ ವೃತ್ತಿಜೀವನದಿಂದ ನಿವೃತ್ತಿಯಾಗುತ್ತಾನೆ. ಹಾಗೊಂದು ವೇಳೆ ಕೈಕಾಲು ಗಟ್ಟಿ ಇದ್ದರೆ, ಬದುಕಿನ ಅನಿವಾರ್ಯತೆ ಇದ್ದರೆ ಸುಮಾರು 70 ವರ್ಷಗಳವರೆಗೆ ದುಡಿಯಬಲ್ಲನು. ಆದರೆ, ಇಲ್ಲೊಬ್ಬ ಅಜ್ಜಿ ತಮ್ಮ 86 ನೇ ವರ್ಷ ಪ್ರಾಯದಲ್ಲೂ ಕಾಯಕದಲ್ಲಿ ತೊಡಗಿದ್ದಾರೆ.
ಅವರಿಗಿನ್ನೂ ದಣಿವಾಗಿಲ್ಲವಂತೆ! ಅಮೆರಿಕಾದ ಬೆಟ್ಟೆ ನ್ಯಾಶ್ ಎಂಬವರು 86 ನೇ ಪ್ರಾಯದಲ್ಲೂ ವಿಮಾನದ ಪರಿಚಾರಕಿಯಾಗಿ ದುಡಿಯುತ್ತಿದ್ದು, ಅತಿ ಹಿರಿಯ ಪರಿಚಾರಕಿ ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
BREAKING: ಸ್ಪೈಸ್ ಜೆಟ್ ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ; ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ
ಒಬ್ಬ ವ್ಯಕ್ತಿಯ ನಿವೃತ್ತಿ ವಯಸ್ಸಿಗಿಂತ ಹೆಚ್ಚು ಕಾಲ ಅವರು ಈ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಅಂದರೆ, ಕಳೆದ 65 ವರ್ಷಗಳಿಂದಲೂ ಅಮೆರಿಕನ್ ಏರ್ ಲೈನ್ಸ್ ನಲ್ಲಿ ಪರಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಟ್ಟೆ ಅವರು 1957 ರಲ್ಲಿ ಏರ್ ಹೋಸ್ಟೆಸ್ ಆಗಿ ಕೆಲಸಕ್ಕೆ ಸೇರಿದ್ದರು.
ಆರೂವರೆ ದಶಕಗಳ ಕಾಲ ಪರಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಟ್ಟೆ ಅವರೆಂದರೆ ಅನೇಕ ಪ್ರಯಾಣಿಕರಿಗೆ ಎಲ್ಲಿಲ್ಲದ ಪ್ರೀತಿ. ಅವರು ಇರುವ ವಿಮಾನದಲ್ಲಿ ಪ್ರಯಾಣಿಸುವುದೇ ಚೆಂದ ಎಂದು ಪ್ರಯಾಣಿಕರು ಹೇಳುತ್ತಾರೆ. ನಾನು ಪ್ರತಿ ವರ್ಷ ವಿಮಾನದಲ್ಲಿ ಸಾವಿರಾರು ಮೈಲಿ ಪ್ರಯಾಣ ಮಾಡುತ್ತೇನೆ. ಆದರೆ, ಬೆಟ್ಟೆ ಇರುವ ಈ ವಿಮಾನದಲ್ಲಿ ಪ್ರಯಾಣ ಮಾಡುವುದು ನನಗೆ ಖುಷಿ ತರುತ್ತದೆ. ಏಕೆಂದರೆ, ಬೆಟ್ಟೆ ಅವರು ಪ್ರಯಾಣಿಕರನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ ಎಂದು ಪ್ರಯಾಣಿಕರು ಹೇಳುತ್ತಾರೆ.