
1983ರ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಜೀವನಾಧರಿತ ಚಿತ್ರ ’83’, ಕೋವಿಡ್ ಕಾಟದಿಂದಾಗಿ ಓಟಿಟಿ ಪ್ಲಾಟ್‌ಫಾರಂಗಳಲ್ಲಿ ಬಿತ್ತರವಾಗಲಿದೆ ಎಂಬ ವದಂತಿಗಳು ಜೋರಾಗಿದ್ದವು.
ರಣವೀರ್ ಸಿಂಗ್‌ರನ್ನು ಕಪಿಲ್ ದೇವ್ ಪಾತ್ರದಲ್ಲಿ ತೋರಲಾಗಿರುವ ಈ ಚಿತ್ರವು ಡಿಸೆಂಬರ್ 24ರಂದು ಬಿಡುಗಡೆಯಾಗಿದೆ. ಭಾರೀ ಮೆಚ್ಚುಗೆ ಕೇಳಿ ಬಂದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧಿಸಿಲ್ಲ 83.
BIG BREAKING: ರಾಜ್ಯದ 5 ಜಿಲ್ಲೆಗಳಲ್ಲಿ ಒಮಿಕ್ರಾನ್ ಕಂಟಕ; ಲಸಿಕೆ ಪಡೆಯದಿದ್ದರೆ ಜೀವಕ್ಕೆ ಅಪಾಯ; ಸಚಿವ ಸುಧಾಕರ್ ಎಚ್ಚರಿಕೆ
ಒಮಿಕ್ರಾನ್ ಕಾಟದಿಂದ ದೇಶದಲ್ಲೇನಾದರೂ ಇನ್ನೊಂದು ಲಾಕ್‌ಡೌನ್ ಆದರೆ ರಿಲಾಯನ್ಸ್ ಎಂಟರ್ಟೇನ್ಮೆಂಟ್ ಮತ್ತು ಫ್ಯಾಂಟಂ ಫಿಲ್ಮ್ಸ್ ’83’ಯನ್ನು ಓಟಿಟಿ ಪ್ಲಾಟ್‌ಫಾರಂನಲ್ಲಿ ಬಿತ್ತರಿಸಲಿದ್ದಾರೆ ಎಂಬ ಗುಮಾನಿಗಳು ಕೇಳಿ ಬಂದಿದ್ದವು.
ಆದರೆ ಈ ಕುರಿತು ಸ್ಪಷ್ಟನೆ ಕೊಟ್ಟಿರುವ ರಿಲಾಯನ್ಸ್ ಎಂಟರ್ಟೇನ್ಮೆಂಟ್‌ನ ಶಿಬಶಿಶ್ ಸರ್ಕಾರ್, “83 ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕನಿಷ್ಠ 8 ವಾರಗಳ ಬಳಿಕ ಮಾತ್ರವೇ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದಿದ್ದಾರೆ.
ಏಕಕಾಲದಲ್ಲಿ ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಿರುವ ’83’ ದೇಶೀ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್‌ನತ್ತ ದಾಪುಗಾಲಿಟ್ಟಿದೆ.