alex Certify 19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್‌ಝೌನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ 19 ನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆಗಳನ್ನು ನೇತುಹಾಕುತ್ತಿದ್ದಾಗ ವೃದ್ಧೆಯು ಆಕಸ್ಮಿಕವಾಗಿ ಜಾರಿಬಿದ್ದಿದ್ದಾರೆ. ವೃದ್ಧೆಯ ಕಾಲು 18ನೇ ಮಹಡಿಯಲ್ಲಿದ್ದರೆ, ದೇಹವು 17ನೇ ಮಹಡಿಯಲ್ಲಿ ತಲೆಕೆಳಗಾಗಿ ನೇತಾಡಿದ್ದಾರೆ.

ನಿಮ್ಮನ್ನು ಕೋಟ್ಯಾಧಿಪತಿ ಮಾಡಬಹುದು 2000 ರೂಪಾಯಿ ನೋಟು

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. ರಕ್ಷಣಾ ತಂಡವು 18 ನೇ ಮಹಡಿ ಮತ್ತು 17 ನೇ ಮಹಡಿಯಿಂದ ವೃದ್ಧೆಯನ್ನು ಹಿಡಿದು ಸುರಕ್ಷತಾ ಹಗ್ಗವನ್ನು ಜೋಡಿಸಿದೆ. 18ನೇ ಮಹಡಿಯಲ್ಲಿದ್ದ ಸಿಬ್ಬಂದಿ ವೃದ್ಧೆಯನ್ನು ಹಗ್ಗದಿಂದ ಹಿಡಿದಿದ್ದರೆ, 17ನೇ ಮಹಡಿಯಲ್ಲಿದ್ದವರು ಆಕೆಯನ್ನು ಇಳಿಸಿಕೊಂಡಿದ್ದಾರೆ. ವೃದ್ಧೆಯನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದ್ದು, ಯಾವುದೇ ಗಾಯವಾಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್ ಆಗಿದ್ದು, ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ಜನರು ಶ್ಲಾಘಿಸಿದ್ದಾರೆ.

— South China Morning Post (@SCMPNews) November 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...