
ದಕ್ಷಿಣ ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಝೌನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ನ 19 ನೇ ಮಹಡಿಯ ಬಾಲ್ಕನಿಯಲ್ಲಿ ಬಟ್ಟೆಗಳನ್ನು ನೇತುಹಾಕುತ್ತಿದ್ದಾಗ ವೃದ್ಧೆಯು ಆಕಸ್ಮಿಕವಾಗಿ ಜಾರಿಬಿದ್ದಿದ್ದಾರೆ. ವೃದ್ಧೆಯ ಕಾಲು 18ನೇ ಮಹಡಿಯಲ್ಲಿದ್ದರೆ, ದೇಹವು 17ನೇ ಮಹಡಿಯಲ್ಲಿ ತಲೆಕೆಳಗಾಗಿ ನೇತಾಡಿದ್ದಾರೆ.
ನಿಮ್ಮನ್ನು ಕೋಟ್ಯಾಧಿಪತಿ ಮಾಡಬಹುದು 2000 ರೂಪಾಯಿ ನೋಟು
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. ರಕ್ಷಣಾ ತಂಡವು 18 ನೇ ಮಹಡಿ ಮತ್ತು 17 ನೇ ಮಹಡಿಯಿಂದ ವೃದ್ಧೆಯನ್ನು ಹಿಡಿದು ಸುರಕ್ಷತಾ ಹಗ್ಗವನ್ನು ಜೋಡಿಸಿದೆ. 18ನೇ ಮಹಡಿಯಲ್ಲಿದ್ದ ಸಿಬ್ಬಂದಿ ವೃದ್ಧೆಯನ್ನು ಹಗ್ಗದಿಂದ ಹಿಡಿದಿದ್ದರೆ, 17ನೇ ಮಹಡಿಯಲ್ಲಿದ್ದವರು ಆಕೆಯನ್ನು ಇಳಿಸಿಕೊಂಡಿದ್ದಾರೆ. ವೃದ್ಧೆಯನ್ನು ಸುರಕ್ಷಿತವಾಗಿ ಮರಳಿ ಕರೆತರಲಾಗಿದ್ದು, ಯಾವುದೇ ಗಾಯವಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಈ ಭಯಾನಕ ವಿಡಿಯೋ ವೈರಲ್ ಆಗಿದ್ದು, ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಯನ್ನು ಜನರು ಶ್ಲಾಘಿಸಿದ್ದಾರೆ.