alex Certify ಹುತಾತ್ಮರಿಗೆ ಗೌರವ ಸಲ್ಲಿಸಲು ಬರೋಬ್ಬರಿ 230 ಕಿಮೀ ಕ್ರಮಿಸಿದ 80 ರ ಮಾಜಿ ಯೋಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುತಾತ್ಮರಿಗೆ ಗೌರವ ಸಲ್ಲಿಸಲು ಬರೋಬ್ಬರಿ 230 ಕಿಮೀ ಕ್ರಮಿಸಿದ 80 ರ ಮಾಜಿ ಯೋಧ

1971ರ ಇಂಡೋ – ಪಾಕ್​ ಯುದ್ಧದಲ್ಲಿ ಮಡಿದ ತನ್ನ ಒಡನಾಡಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ 80 ವರ್ಷದ ಮಾಜಿ ಯೋಧರೊಬ್ಬರು ತನ್ನ ಹಳೆಯ ಮೊಪೆಡ್​ ಮೂಲಕವೇ ಪಂಜಾಬ್​​​ನ ತನ್ನ ತವರು ಪಟ್ಟಣದಿಂದ ಜಮ್ಮು & ಕಾಶ್ಮೀರದ ಅಖ್ನೂರ್​ ಸೆಕ್ಟರ್​ಗೆ ಬರೋಬ್ಬರಿ 230 ಕಿಲೋಮೀಟರ್​ ದೂರ ಪ್ರಯಾಣಿಸಿದ್ದಾರೆ.

ಹೋಶಿಯಾಪುರ ಜಿಲ್ಲೆಯ ಮುಕೇರಿಯನ್​ ಬೆಲ್ಟ್​​ನ ಸೇನಾಧಿಕಾರಿಯಾಗಿದ್ದ ಸುಬೇದಾರ್​ ಜೈ ಸಿಂಗ್​ 1965 ರಿಂದ 1971ರವರೆಗೆ ನಡೆದ ಇಂಡೋ – ಪಾಕ್​ ಯುದ್ಧದಲ್ಲಿ ಭಾಗವಹಿಸಿದ್ದರು. ಅಖ್ನೂರ್ ಸೆಕ್ಟರ್​ನಲ್ಲಿ ತಮ್ಮ ಒಡನಾಡಿಗಳ ಜೊತೆಯಲ್ಲಿ ಧೈರ್ಯದಿಂದ ಹೋರಾಡಿದ್ದರು.

1965ರ ಯುದ್ಧದ ಸಂದರ್ಭದಲ್ಲಿ ಜೈ ಸಿಂಗ್​ ಹಾಜಿಪಿರ್​ ಸೆಕ್ಟರ್​ನಲ್ಲಿ ಗಿಟಿಯಾನ್ ವಶಪಡಿಸಿಕೊಳ್ಳುವ ವೇಳೆ ಗಾಯಗೊಂಡಿದ್ದರು ಎಂದು ಲೆ. ಕರ್ನಲ್​ ಆನಂದ್​ ಹೇಳಿದ್ದಾರೆ. ಸುಬೇದಾರ್​ ಅಖ್ನೂರ್​​ ಚಪ್ರಿಯಾಲ್​ ಪ್ರದೇಶದಲ್ಲಿ 1971ರ ಯುದ್ಧದಲ್ಲಿ 216 ಫೀಲ್ಡ್​ ರೆಜಿಮೆಂಟ್​​​ನೊಂದಿಗೆ ಭಾಗವಹಿಸಿದ್ದರು.

ವಿಜಯ ದಿವಸ್​​ ಅಂಗವಾಗಿ ಜೈ ಸಿಂಗ್​​ ತಮ್ಮ ನಿವಾಸದಿಂದ ಬರೋಬ್ಬರಿ 230 ಕಿಲೋಮೀಟರ್​ ದೂರವನ್ನು ಮೊಪೆಡ್​ನಲ್ಲಿಯೇ ಕ್ರಮಿಸುವ ಮೂಲಕ ಅಖ್ನೂರ್​ ಸೆಕ್ಟರ್​ಗೆ ಆಗಮಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...