ಮೊಬೈಲ್ ಗೇಮ್ ಆಡಲು, ವಿಡಿಯೊಗಳನ್ನು ನೋಡಲೆಂದು ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ ಕೆಲವು ಕಾಲ ಸ್ಮಾರ್ಟ್‌ಫೋನ್‌ಗಳನ್ನು ಕೊಡುತ್ತಾರೆ. ಮೊಬೈಲ್‌ನಿಂದ ಮಕ್ಕಳನ್ನು ದೂರ ಇರಿಸಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಿಲ್ಲ. ಯಾಕೆಂದರೆ, ಕೊರೊನಾ ಕಾಟದಿಂದಾಗಿ ಮೊಬೈಲ್‌ನಲ್ಲೇ ಶಾಲೆಗಳು ಪಾಠ ಮಾಡುವಂತಾಗಿದೆ. ಇದೇ ಭವಿಷ್ಯದ ಕಲಿಕಾ ವಿಧಾನವೂ ಆಗಲಿದೆ.
ನಟಿ ಶ್ರೀದೇವಿ ಚಿತ್ರದ ಹಾಡಿಗೆ ‘ಡಾನ್ಸಿಂಗ್ ದಾದಿ’ಯ ಬೊಂಬಾಟ್ ಸ್ಟೆಪ್ಸ್
ಹೀಗೆಯೇ 8 ವರ್ಷದ ಬಾಲಕಿಗೆ ತಾಯಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್ ಕೊಟ್ಟಿದ್ದರು. ಆಕೆಯು ಆನ್‌ಲೈನ್ ಗೇಮ್ ಆಡುತ್ತಿದ್ದಾಳೆ ಎಂದು ಭಾವಿಸಿ ಕ್ಷಣಕಾಲ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು. ನಂತರ ಸ್ಮಾರ್ಟ್‌ಫೋನ್ ವಾಪಸ್ ಪಡೆದಾಗ ಅಮ್ಮನಿಗೆ ದೊಡ್ಡ ಆಘಾತ ಕಾದಿತ್ತು. ಬಾಲಕಿಯು 61 ಸಾವಿರ ರೂ. ಮೌಲ್ಯದ ಶಾಪಿಂಗ್ ಮಾಡಿದ್ದಳು. ಅದೂ, ಗುಡ್ಡಗಾಡು ಪ್ರದೇಶಕ್ಕೆ ಪ್ರಯಾಣ ಹೋಗಿ ಅಲ್ಲಿಯೇ ಕ್ಯಾಂಪ್ ಹಾಕಲು ಅನುಕೂಲಕರವಾದ ಸಾಧನಗಳನ್ನು ಖರೀದಿ ಮಾಡಿದ್ದಳು..!
BIG NEWS: ಶಾರೂಕ್ ಪುತ್ರನಿಂದ ಸಹ ಖೈದಿಗಳ ಕುಟುಂಬಕ್ಕೆ ಹಣಕಾಸು ನೆರವು ನೀಡುವ ವಾಗ್ದಾನ
ಸಿಂಗಲ್ ಬೆಡ್ ಏರ್ ಮ್ಯಾಟ್ರೆಸ್, ಪಿಲ್ಲೋ, ಬ್ಲ್ಯಾಂಕೆಟ್ಸ್, ಕಫ್ಸ್‌ಗಳ ಜತೆಗೆ ಹ್ಯಾರಿ ಪಾಟರ್ ಸಿನಿಮಾದ ಕಥೆಗಳುಳ್ಳ ಪುಸ್ತಕಗಳು ಮತ್ತು ಆಟಿಕೆಗಳನ್ನು 8ರ ಪೋರಿ ಆನ್‌ಲೈನ್ ವೆಬ್‌ಸೈಟ್ ಮೂಲಕ ಖರೀದಿ ಮಾಡಿಬಿಟ್ಟಿದ್ದಾಳೆ. ಇಷ್ಟಲ್ಲದೇ ಮೈಕ್ರೋಸ್ಕೋಪ್ ಕೂಡ ಖರೀದಿ ಮಾಡಿದ್ದಾಳೆ. ಬ್ಯಾಂಕ್ ಗಳ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದು, ಅದರ ಗ್ರಾಹಕ ಸ್ನೇಹಿ ವ್ಯವಸ್ಥೆಯು ಮಕ್ಕಳ ಆಟಿಕೆ ಖರೀದಿಗೆ ಸ್ನೇಹಿ ಆಗಿ ಹೋಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ 8ರ ಪೋರಿಯ ಸಾಹಸ ಕೇಳಿದವರು ಪ್ರತಿಕ್ರಿಯಿಸುತ್ತಿದ್ದಾರೆ.