alex Certify ಚಿತ್ರೀಕರಣ ವೇಳೆಯಲ್ಲೇ 8 ಮಾಡೆಲ್ ಗಳ ಮೇಲೆ ಗ್ಯಾಂಗ್ ರೇಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರೀಕರಣ ವೇಳೆಯಲ್ಲೇ 8 ಮಾಡೆಲ್ ಗಳ ಮೇಲೆ ಗ್ಯಾಂಗ್ ರೇಪ್

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್ ಬಳಿ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ 8 ಮಾಡೆಲ್‌ ಗಳ ಮೇಲೆ ಅತ್ಯಾಚಾರ ಎಸಗಲಾಗಿದೆ.

ಬಂದೂಕುಧಾರಿಗಳ ತಂಡವೊಂದು ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸ್ಥಳಕ್ಕೆ ನುಗ್ಗಿ ಎಂಟು ಯುವತಿಯರ ಮೇಲೆ ಅತ್ಯಾಚಾರ ಎಸಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಜೋಹಾನ್ಸ್‌ ಬರ್ಗ್‌ ನ ಪಶ್ಚಿಮದಲ್ಲಿರುವ ಸಣ್ಣ ಪಟ್ಟಣವಾದ ಕ್ರುಗರ್ಸ್‌ ಡಾರ್ಪ್‌ ನ ಹೊರವಲಯದಲ್ಲಿ ಗುರುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 20 ಶಂಕಿತರಲ್ಲಿ ಮೂವರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಸಚಿವ ಭೆಕಿ ಸೆಲೆ ತಿಳಿಸಿದ್ದಾರೆ.

ಸಿಬ್ಬಂದಿ ಮತ್ತು ಪಾತ್ರವರ್ಗದವರು ಚಿತ್ರೀಕರಣದ ಉಪಕರಣಗಳನ್ನು, ಸೆಟ್ ಸಿದ್ಧಪಡಿಸುವಾಗ ಗ್ಯಾಂಗ್ ದಾಳಿ ಮಾಡಿದೆ. ಮಹಿಳೆಯರು 18 ರಿಂದ 35 ವರ್ಷದೊಳಗಿನವರು. ಒಬ್ಬ ಮಹಿಳೆ ಮೇಲೆ 10 ಪುರುಷರು ಮತ್ತು ಇನ್ನೊಬ್ಬರ ಮೇಲೆ ಎಂಟು ಜನರು ಅತ್ಯಾಚಾರ ಎಸಗಿದ್ದಾರೆ. ಸ್ಥಳದಲ್ಲಿದ್ದ ಪುರುಷರನ್ನು ಸಹ ವಿವಸ್ತ್ರಗೊಳಿಸಿ ಅವರ ವೈಯಕ್ತಿಕ ಕೂಡ ವಸ್ತುಗಳನ್ನು ದೋಚಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...