ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದುರ್ಬಳಕೆ ಮಾಡಿಕೊಂಡ ಎಂಟು ಲಕ್ಷ ನಿದರ್ಶನಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ.
ಪ್ರತಿ ವರ್ಷ ಕೇಂದ್ರ ಸರ್ಕಾರದಿಂದ 6,000 ರೂ.ಗಳ ಸಹಾಯಧನವನ್ನು ಪಿಎಂ ಕಿಸಾನ್ ಯೋಜನೆಯಿಂದ ಪಡೆಯುತ್ತಿದ್ದ 7.8 ಲಕ್ಷ ಅನರ್ಹ ಜನ್‌ಧನ್ ಖಾತೆಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಇವುಗಳ ಪೈಕಿ 2.3 ಲಕ್ಷ ಖಾತೆಗಳು ಉದ್ಯಮಿಗಳು/ವರ್ತಕರು ಹಾಗೂ ತೆರಿಗೆ ಪಾವತಿಸುವ ಇತರೆ ವೃತ್ತಿಗಳಲ್ಲಿರುವವರದ್ದಾಗಿವೆ. ಇದಕ್ಕಿಂತ ಅಚ್ಚರಿಯೆಂದರೆ ಇವರ ಪೈಕಿ 32,000 ಮಂದಿ ಅದಾಗಲೇ ಮೃತಪಟ್ಟಿದ್ದಾರೆ.
ಗರ್ಭಿಣಿಯಾಗಿರುವ ಮಾಹಿತಿ ಹಂಚಿಕೊಂಡ ʼಸ್ಲಮ್ ಡಾಗ್ ಮಿಲಿಯೇನರ್ʼ ಖ್ಯಾತಿಯ ನಟಿ
ಆನ್ಲೈನ್ ವ್ಯವಸ್ಥೆಯಲ್ಲಿ ಪರಿಶೀಲನೆ ಮಾಡುವಾಗ ಇಷ್ಟೆಲ್ಲಾ ಅವ್ಯವಹಾರಗಳು ಕಂಡುಬಂದ ಹಿನ್ನೆಲೆಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಗಳ ಜಂಟಿ ತಂಡವೊಂದು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲೂ ಫಲಾನುಭವಿಗಳ ಖಾತೆಯನ್ನು ಪರಿಶೀಲನೆ ಮಾಡಲಿವೆ.
ಈ ಮೇಲ್ಕಂಡ ಬ್ಯಾಂಕ್ ಖಾತೆಗಳಿಗೆ ಪಾನ್ ಹಾಗೂ ಆಧಾರ್ ಲಿಂಕಿಂಗ್ ಆಗಿದ್ದ ಕಾರಣ ಅವುಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಣ್ಣ ಭೂ ಹಿಡುವಳಿ ಹೊಂದಿರುವ ರೈತರಿಗೆ ನೆರವಾಗಲೆಂದು 2019ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ಉತ್ತರ ಪ್ರದೇಶ ಒಂದರಲ್ಲೇ 2.37 ಕೋಟಿ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.