alex Certify ಕಿಡ್ನಿಯ ಆರೋಗ್ಯ ಸಂಪೂರ್ಣ ಹಾಳು ಮಾಡುತ್ತೆ ನೀವು ಮಾಡುವ ಈ 8 ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಡ್ನಿಯ ಆರೋಗ್ಯ ಸಂಪೂರ್ಣ ಹಾಳು ಮಾಡುತ್ತೆ ನೀವು ಮಾಡುವ ಈ 8 ತಪ್ಪು

ದೇಹದಲ್ಲಿ ಕಿಡ್ನಿಗೆ ಅದರದ್ದೇ ಆದ ಮಹತ್ವವಿದೆ. ಇದು ರಕ್ತವನ್ನು ಸಂಸ್ಕರಿಸುತ್ತದೆ, ವ್ಯರ್ಥವನ್ನು ಹೊರಗೆ ಹಾಕುತ್ತದೆ, ದೇಹದಲ್ಲಿ ದ್ರವ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ಹೀಗೆ ದೇಹದ ಅನೇಕ ಕೆಲಸಗಳನ್ನು ಈ ಕಿಡ್ನಿಗಳೇ ನಿಭಾಯಿಸುತ್ತವೆ. ನಮ್ಮ ದೇಹದ ರಕ್ತವು ಒಂದು ದಿನದಲ್ಲಿ 40 ಬಾರಿ ಕಿಡ್ನಿಯ ಮೂಲಕ ಸಾಗುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.

ಕಿಡ್ನಿಯ ಆರೋಗ್ಯಕ್ಕೆ ಘಾಸಿ ಉಂಟು ಮಾಡಬಲ್ಲ ಸಾಮಾನ್ಯ ಅಭ್ಯಾಸಗಳು :

ಪೇನ್​ಕಿಲ್ಲರ್​ಗಳ ಸೇವನೆ : ಪೇನ್​ ಕಿಲ್ಲರ್​ಗಳನ್ನು ಸೇವನೆ ಮಾಡೋದ್ರಿಂದ ನಿಮಗೆ ನೋವಿನಿಂದ ಮುಕ್ತಿ ಸಿಗಬಹುದು. ಆದರೆ ಇದು ನಿಮ್ಮ ಕಿಡ್ನಿಯ ಆರೋಗ್ಯವನ್ನು ಹಾಳು ಮಾಡುತ್ತವೆ. ಅತಿಯಾದ ನೋವು ನಿವಾರಕ ಮಾತ್ರೆಗಳ ಸೇವನೆಯು ನಿಮ್ಮ ಮೂತ್ರಪಿಂಡಗಳನ್ನು ಸಂಪೂರ್ಣವಾಗಿ ಹಾಳು ಮಾಡಿಬಿಡಬಹುದು.

1500 ವರ್ಷಗಳ ಹಿಂದಿನ ವೈನ್ ಉತ್ಪಾದನಾ ಘಟಕ ಪತ್ತೆ

ಅತಿಯಾದ ಉಪ್ಪು : ಉಪ್ಪಿನಂಶ ಹೆಚ್ಚಿರುವ ಆಹಾರ ಪದಾರ್ಥಗಳು ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮ ಬೀರುವುದು ಮಾತ್ರವಲ್ಲದೇ ನಿಮ್ಮ ಕಿಡ್ನಿಯ ಆರೋಗ್ಯವನ್ನೂ ಹಾಳು ಮಾಡಿಬಿಡಬಹುದು. ಹೀಗಾಗಿ ಅತಿಯಾದ ಉಪ್ಪಿನ ಸೇವನೆ ಒಳ್ಳೆಯದಲ್ಲ.

ಜಂಕ್​ಫುಡ್​ಗಳ ಸೇವನೆ : ಜಂಕ್​ಫುಡ್​ಗಳನ್ನು ಸೋಡಿಯಂ ಹಾಗೂ ಪಾಸ್ಪರಸ್​ ಅಂಶ ಅತಿಯಾಗಿ ಇರುತ್ತದೆ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಆಹಾರಗಳಿಂದ ನೀವು ದೂರವೇ ಇರಬೇಕು.

ಊಟ ಮಾಡಿದ ನಂತರ ಪ್ಲೇಟ್ ತೊಳೆಯದ ಗಂಡ: ಪತ್ನಿ ಮಾಡಿದ್ದೇನು ಗೊತ್ತಾ….?

ನೀರು ಸೇವನೆ ಮಾಡದೇ ಇರೋದು : ಸದಾ ನೀರು ಕುಡಿಯುತ್ತಲೇ ಇದ್ದರೆ ನಿಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳು ಬೇಗನೆ ದೇಹದಿಂದ ಹೊರ ಹೋಗುತ್ತವೆ. ಅಲ್ಲದೇ ಕಿಡ್ನಿಯಲ್ಲಿ ಕಲ್ಲು ಕೂಡ ಉಂಟಾಗುವುದಿಲ್ಲ. ಹೀಗಾಗಿ ದಿನಕ್ಕೆ 3-4 ಲೀಟರ್​ ನೀರನ್ನು ಸೇವನೆ ಮಾಡಬೇಕು.

ನಿದ್ರಾಹೀನತೆ : ಉತ್ತಮ ಆರೋಗ್ಯಕ್ಕೆ ನಿದ್ರೆ ಕೂಡ ತುಂಬಾನೇ ಮುಖ್ಯ. ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುವಲ್ಲಿ ನಿದ್ರೆಯು ಪ್ರಮುಖ ಪಾತ್ರ ವಹಿಸುತ್ತದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕಿಡ್ನಿಯನ್ನು ಸಮತೋಲನದಲ್ಲಿಡಲು ನಿದ್ರೆ ಪ್ರಮುಖ ಪಾತ್ರ ವಹಿಸುತ್ತದೆ.

ಅತಿಯಾದ ಸಕ್ಕರೆ ಸೇವನೆ : ಸಕ್ಕರೆಯನ್ನು ಸೈಲೆಂಟ್​ ಕಿಲ್ಲರ್​ ಎಂದು ಹೇಳಿದ್ರೆ ತಪ್ಪಾಗುವುದಿಲ್ಲ. ಅತಿಯಾದ ಸಕ್ಕರೆ ಸೇವನೆಯು ಮಧುಮೇಹ, ಅಧಿಕ ರಕ್ತದೊತ್ತಡದ ಜೊತೆಯಲ್ಲಿ ಕಿಡ್ನಿಯ ಆರೋಗ್ಯವನ್ನೂ ಹಾಳುಗೆಡವುತ್ತದೆ.

SHOCKING: ಜೀವ ತೆಗೆದ ಮೊಟ್ಟೆ, ಗಂಟಲಲ್ಲಿ ಮೊಟ್ಟೆ ಸಿಲುಕಿ ಮಹಿಳೆ ಸಾವು

ಧೂಮಪಾನ : ಧೂಮಪಾನದಿಂದ ದೇಹದ ಯಾವುದೇ ಅಂಗಕ್ಕೂ ಲಾಭವಿಲ್ಲ. ಧೂಮಪಾನಿಗಳ ಮೂತ್ರದಲ್ಲಿ ಪ್ರೋಟಿನ್​ ಅಂಶ ಇರುತ್ತದೆ. ಇದು ಕಿಡ್ನಿಯು ಹಾಳಾಗಿದೆ ಎಂಬುದಕ್ಕೆ ಉದಾಹರಣೆಯಾಗಿದೆ.

ಮದ್ಯಪಾನ : ಮದ್ಯಪಾನವು ಕೂಡ ಧೂಮಪಾನದಂತೆಯೇ ಆರೋಗ್ಯಕ್ಕೆ ಮಾರಕ. ಇದರಿಂದ ಕಿಡ್ನಿಯಲ್ಲಿ ಕಾಯಿಲೆಗಳು ಉಂಟಾಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...