
ಸಸ್ಮಿತ ಗೊಚ್ಚೈತ್ ಹೆಸರಿನ ಈ ಮಹಿಳೆ ತನ್ನ ಪತಿಯೊಂದಿಗೆ ಇದ್ದ ವೇಳೆ ತಮ್ಮ ಎರಡು ವರ್ಷದ ಮಗು ಮನೆಯೊಳಗೆ ಬಂದಿದ್ದ ಹಾವಿನತ್ತ ತೆವಳುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಪತಿ ಮಗುವನ್ನು ಹಾವಿನ ಹತ್ತಿರದಿಂದ ತಮ್ಮತ್ತ ಎಳೆದುಕೊಳ್ಳಲು ಸಫಲರಾಗಿದ್ದಾರೆ.
ಆದರೆ ಕೊಂಚವೂ ವಿಚಲಿತರಾಗದ ಸಾಸ್ಮೈತೆ, ವಿಷಪೂರಿತ ಹಾವಿನತ್ತ ತೆರಳಿ, ಅದರ ಬಾಲವನ್ನು ಹಿಡಿದು ಅದನ್ನು ರಕ್ಷಿಸಿ, ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಕಾಡಿಗೆ ಬಿಡಲು ಸಫಲರಾಗಿದ್ದಾರೆ.