alex Certify ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೋಳಿ ಹಬ್ಬಕ್ಕೆ ವಿಶೇಷ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹೋಳಿ ಹಬ್ಬಕ್ಕೆ ವಿಶೇಷ ಗಿಫ್ಟ್

ನವದೆಹಲಿ: ಮುಂದಿನ ತಿಂಗಳು ಹೋಳಿ ಹಬ್ಬಕ್ಕೆ ಮೊದಲು ಕೇಂದ್ರ ಸರ್ಕಾರದ 1 ಕೋಟಿ ಉದ್ಯೋಗಿಗಳಿಗೆ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಕೆಲವು ತಿಂಗಳುಗಳಿಂದ ಡಿಎ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕೇಂದ್ರ ಸರಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ಮೊದಲು ಶೇಕಡ 4 ರಷ್ಟು ಡಿಎ ಹೆಚ್ಚಳಮಾಡುವ ನಿರೀಕ್ಷೆಯಿದ್ದು ಇದರೊಂದಿಗೆ ಶೇಕಡ 21 ರಷ್ಟು ಏರಿಕೆಯಾಗಲಿದೆ.

ಕೇಂದ್ರ ಸರ್ಕಾರ ನೌಕರರಿಗೆ ಶೇಕಡ 17 ರಷ್ಟು ಡಿಎ ನೀಡಲಾಗುತ್ತಿದ್ದು, ಶೇಕಡ 4 ರಷ್ಟು ಡಿಎ ಹೆಚ್ಚಳದಿಂದ ಸುಮಾರು 48 ಲಕ್ಷ ಉದ್ಯೋಗಿಗಳ ವೇತನ ಏರಿಕೆಯಾಗಲಿದೆ. ಜೊತೆಗೆ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಲಾಭ ಸಿಗಲಿದೆ.

ಶೇಕಡ 4 ರಷ್ಟು ಡಿಎ ಬಾಕಿ ನೀಡಲು ಕೂಡ ಚಿಂತನೆ ನಡೆದಿದ್ದು, ಡಿಎ ಹೆಚ್ಚಳವಾದರೆ ಶೇಕಡ 25 ರಷ್ಟು ಏರಿಕೆಯಾಗಬಹುದು. ಆದರೆ, ಈ ಕುರಿತು ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಕೇಂದ್ರದ 7ನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಡಿಎ ಹೆಚ್ಚಳ ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...