alex Certify BIG NEWS: ನೌಕರರಿಗೆ ಕೇಂದ್ರ ಸರ್ಕಾರ ನೀಡಿದೆ ದೊಡ್ಡ ಉಡುಗೊರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೌಕರರಿಗೆ ಕೇಂದ್ರ ಸರ್ಕಾರ ನೀಡಿದೆ ದೊಡ್ಡ ಉಡುಗೊರೆ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ಸರ್ಕಾರ, ಡಿಎ, ಡಿಆರ್ ಜೊತೆಗೆ ಮನೆ ಬಾಡಿಗೆ ಭತ್ಯೆಯನ್ನು  ಹೆಚ್ಚಿಸಿತ್ತು. ಈಗ ಸರ್ಕಾರ, ಕೇಂದ್ರ ಉದ್ಯೋಗಿಗಳಿಗಾಗಿ ಮನೆ ನಿರ್ಮಾಣ ಮುಂಗಡ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಿದೆ. ಸರ್ಕಾರಿ ನೌಕರರು, ಮನೆ ಖರೀದಿಗೆ ಮುಂದಾದ್ರೆ, 2022 ರ ಮಾರ್ಚ್ ವರೆಗೆ ಕೈಗೆಟುಕುವ ದರದಲ್ಲಿ ಗೃಹ ಸಾಲದ ಸೌಲಭ್ಯ ಸಿಗಲಿದೆ.

ಕೇಂದ್ರ ಸರ್ಕಾರ, ಮನೆ ನಿರ್ಮಾಣ ಮುಂಗಡ ಯೋಜನೆ ಲಾಭವನ್ನು ಮಾರ್ಚ್, 31, 2022ರವರೆಗೆ ವಿಸ್ತರಿಸಿದೆ. ಕೇಂದ್ರ ಉದ್ಯೋಗಿಗಳಿಗೆ ಸರ್ಕಾರ, ಶೇಕಡಾ 7.9 ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಕೇಂದ್ರ ಸರ್ಕಾರ, ತನ್ನ ಉದ್ಯೋಗಿಗಳಿಗೆ ಗೃಹ ನಿರ್ಮಾಣ ಮುಂಗಡವನ್ನು ನೀಡುತ್ತದೆ. ಇದರಲ್ಲಿ, ಉದ್ಯೋಗಿ ಸ್ವಂತಕ್ಕೆ ಅಥವಾ ಸಂಗಾತಿ ಹೆಸರಿನಲ್ಲಿ ಮನೆ ನಿರ್ಮಿಸಲು ಮುಂಗಡ ತೆಗೆದುಕೊಳ್ಳಬಹುದು. ಈ ಯೋಜನೆಯನ್ನು ಅಕ್ಟೋಬರ್ 1, 2020 ರಿಂದ ಆರಂಭಿಸಲಾಗಿದೆ, ಇದರ ಅಡಿಯಲ್ಲಿ ಮಾರ್ಚ್ 31, 2022 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಶೇಕಡಾ 7.9ರ ಬಡ್ಡಿದರದಲ್ಲಿ ಮನೆ ನಿರ್ಮಾಣ ಮುಂಗಡವನ್ನು ನೀಡುತ್ತದೆ.

7ನೇ ವೇತನ ಆಯೋಗ ಹಾಗೂ ಎಚ್ ಬಿ ಎ ನಿಯಮಗಳ ಶಿಫಾರಸ್ಸುಗಳ ಪ್ರಕಾರ, 5 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನೌಕರರು ಇದ್ರ ಲಾಭ ಪಡೆಯಲಿದ್ದಾರೆ. ಪಿಂಚಣಿದಾರರಿಗೆ ಸರ್ಕಾರ, ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ನೌಕರನ ಮರಣದ ನಂತರ, ಪಿಂಚಣಿ, ಕುಟುಂಬದ ಸದಸ್ಯರಿಗೆ ಹೋಗಲಿದೆ. ನೌಕರನ ಅವಲಂಬಿತರಿಗೆ ಪಿಂಚಣಿಯ ಲಾಭವನ್ನು ಪಡೆಯಲು 7 ವರ್ಷಗಳ ಸೇವೆಯ ಮಿತಿಯನ್ನು ರದ್ದುಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...