alex Certify ʼತುಟ್ಟಿಭತ್ಯೆʼ ಏರಿಕೆ ನಿರೀಕ್ಷೆಯಲ್ಲಿರೋ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಗುಡ್​ನ್ಯೂಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼತುಟ್ಟಿಭತ್ಯೆʼ ಏರಿಕೆ ನಿರೀಕ್ಷೆಯಲ್ಲಿರೋ ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಗುಡ್​ನ್ಯೂಸ್​

2023ನೇ ಸಾಲಿನಲ್ಲಿ ಎರಡನೇ ಬಾರಿಗೆ ಯಾವಾಗ ಡಿಎ ಹೆಚ್ಚಳವಾಗುತ್ತೆ ಅಂತಾ ಲಕ್ಷಗಟ್ಟಲೇ ಕೇಂದ್ರ ಸರ್ಕಾರಿ ನೌಕರರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ.

ಇದೀಗ ಈ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಕೊಡುವಂತಹ ಸುದ್ದಿಯೊಂದು ವೈರಲ್​ ಆಗಿದೆ. ಏಕೆಂದರೆ ಶೀಘ್ರದಲ್ಲಿಯೇ ತುಟ್ಟಿಭತ್ಯೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ನವರಾತ್ರಿ ಹಾಗೂ ದೀಪಾವಳಿ ನಡುವೆ ಕೇಂದ್ರ ಸರ್ಕಾರ ಡಿಎ ಏರಿಕೆ ಘೋಷಣೆ ಮಾಡಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ 3 ಪ್ರತಿಶತ ಡಿಎ ಏರಿಕೆಯಾಗಲಿದೆ ಎಂದು ಹಿಂದಿನ ವರದಿಗಳು ಹೇಳಿದ್ದರೂ ಸಹ ಈ ಅಂಕಿ ಅಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.

ಇಂಡಸ್ಟ್ರಿಯಲ್ ವರ್ಕರ್ಸ್ (ಸಿಪಿಐ-ಐಡಬ್ಲ್ಯು) ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಡಿಎ ಲೆಕ್ಕಾಚಾರದ ಸೂತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 4 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರಿ ನೌಕರರು ಡಿಎ ಅಂಕಿಅಂಶ 45 ಪ್ರತಿಶತವಾಗಬೇಕು ಅಂದರೆ ಕನಿಷ್ಟ ಕೇಂದ್ರದಿಂದ 3 ಪ್ರತಿಶತ ಹೈಕ್​ ಆದರೂ ಬೇಕು ಅಂತಾ ನಿರೀಕ್ಷೆ ಮಾಡ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ 4 ಪರ್ಸೆಂಟ್​ ತುಟ್ಟಿಭತ್ಯೆ ಏರಿಕೆ ಮಾಡೋಕೆ ಮುಂದಾಗಿದೆ ಅನ್ನೋ ಸುದ್ದಿ ಕೇಂದ್ರ ಸರ್ಕಾರಿ ನೌಕರರಿಗೆ ನಿಜಕ್ಕೂ ಬಂಪರ್​ ಸಿಕ್ಕಂತೆ ಆಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ 46 ಪ್ರತಿಶತ ಆಗಲಿದೆ.

ಕೇಂದ್ರ ಸರ್ಕಾರಿ ನೌಕರರಿಗೆ 2023 ರ ಎರಡನೇ ಡಿಎ ಹೆಚ್ಚಳ, ಯಾವಾಗ ಘೋಷಿಸಿದರೂ, 7 ನೇ ವೇತನ ಆಯೋಗದ ನಿಯಮಗಳ ಅಡಿಯಲ್ಲಿ ಜುಲೈ 1, 2023ಕ್ಕೆ ಪೂರ್ವಾನ್ವಯವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...