2023ನೇ ಸಾಲಿನಲ್ಲಿ ಎರಡನೇ ಬಾರಿಗೆ ಯಾವಾಗ ಡಿಎ ಹೆಚ್ಚಳವಾಗುತ್ತೆ ಅಂತಾ ಲಕ್ಷಗಟ್ಟಲೇ ಕೇಂದ್ರ ಸರ್ಕಾರಿ ನೌಕರರು ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ.
ಇದೀಗ ಈ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಕೊಡುವಂತಹ ಸುದ್ದಿಯೊಂದು ವೈರಲ್ ಆಗಿದೆ. ಏಕೆಂದರೆ ಶೀಘ್ರದಲ್ಲಿಯೇ ತುಟ್ಟಿಭತ್ಯೆ ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕಿರುವ ಮಾಹಿತಿಯ ಪ್ರಕಾರ, ನವರಾತ್ರಿ ಹಾಗೂ ದೀಪಾವಳಿ ನಡುವೆ ಕೇಂದ್ರ ಸರ್ಕಾರ ಡಿಎ ಏರಿಕೆ ಘೋಷಣೆ ಮಾಡಲಿದೆ ಎನ್ನಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ 3 ಪ್ರತಿಶತ ಡಿಎ ಏರಿಕೆಯಾಗಲಿದೆ ಎಂದು ಹಿಂದಿನ ವರದಿಗಳು ಹೇಳಿದ್ದರೂ ಸಹ ಈ ಅಂಕಿ ಅಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಇಂಡಸ್ಟ್ರಿಯಲ್ ವರ್ಕರ್ಸ್ (ಸಿಪಿಐ-ಐಡಬ್ಲ್ಯು) ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಡಿಎ ಲೆಕ್ಕಾಚಾರದ ಸೂತ್ರದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 4 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರಿ ನೌಕರರು ಡಿಎ ಅಂಕಿಅಂಶ 45 ಪ್ರತಿಶತವಾಗಬೇಕು ಅಂದರೆ ಕನಿಷ್ಟ ಕೇಂದ್ರದಿಂದ 3 ಪ್ರತಿಶತ ಹೈಕ್ ಆದರೂ ಬೇಕು ಅಂತಾ ನಿರೀಕ್ಷೆ ಮಾಡ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ 4 ಪರ್ಸೆಂಟ್ ತುಟ್ಟಿಭತ್ಯೆ ಏರಿಕೆ ಮಾಡೋಕೆ ಮುಂದಾಗಿದೆ ಅನ್ನೋ ಸುದ್ದಿ ಕೇಂದ್ರ ಸರ್ಕಾರಿ ನೌಕರರಿಗೆ ನಿಜಕ್ಕೂ ಬಂಪರ್ ಸಿಕ್ಕಂತೆ ಆಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ 46 ಪ್ರತಿಶತ ಆಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ 2023 ರ ಎರಡನೇ ಡಿಎ ಹೆಚ್ಚಳ, ಯಾವಾಗ ಘೋಷಿಸಿದರೂ, 7 ನೇ ವೇತನ ಆಯೋಗದ ನಿಯಮಗಳ ಅಡಿಯಲ್ಲಿ ಜುಲೈ 1, 2023ಕ್ಕೆ ಪೂರ್ವಾನ್ವಯವಾಗಲಿದೆ.