ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ವಿಚಾರದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತಲೇ ಇದೆ. ಇದೀಗ ಈ ವಿಚಾರವಾಗಿ ಇನ್ನೊಂದು ಮಹತ್ವದ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ ಹಾಗೂ ಪ್ರಿಯ ಪರಿಹಾರವನ್ನ ಶೀಘ್ರದಲ್ಲೇ ಮರುಸ್ಥಾಪಿಸಲಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಇದೇ ವಾರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗ್ತಿದೆ.
ಈ ಮೊದಲು ಕೇಂದ್ರ ಸರ್ಕಾರವು ಸೆಪ್ಟೆಂಬರ್ ತಿಂಗಳಿನಿಂದ ತುಟ್ಟಿ ಭತ್ಯೆಯನ್ನ ಮರುಸ್ಥಾಪನೆ ಮಾಡೋದಾಗಿ ಹೇಳಿತ್ತು.
ಇದು ಜುಲೈ ತಿಂಗಳಿನಲ್ಲಿಯೇ ಆಗಬೇಕಿತ್ತು. ಆದರೆ ಜೂನ್ 26ರಂದು ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರ ಪ್ರಿಯ ಪರಿಹಾರವನ್ನ ಸೆಪ್ಟೆಂಬರ್ನಲ್ಲಿ ಮರುಸ್ಥಾಪಿಸುವ ನಿರ್ಧಾರವನ್ನ ಕೈಗೊಳ್ಳಲಾಗಿತ್ತು ಎಂದು ಜೆಸಿಎಂ ರಾಷ್ಟ್ರೀಯ ಮಂಡಳಿ ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ.
ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಜುಲೈ 2019ರಿಂದ ಅನ್ವಯವಾಗುವಂತೆ 17 ಪ್ರತಿಶತ ತುಟ್ಟಿ ಭತ್ಯೆಯನ್ನ ಪಡೆಯುತ್ತಿದ್ದಾರೆ. ಕೊರೊನಾದಿಂರಾಗಿ ಕೇಂದ್ರ ಸರ್ಕಾರವು ಕಳೆದ ವರ್ಷ ತುಟ್ಟಿ ಭತ್ಯೆಯಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ.