alex Certify ಸರ್ಕಾರಿ ನೌಕರರಿಗೆ ಭರ್ಜರಿ ಬಂಪರ್ ಕೊಡುಗೆ: ಒಟ್ಟಿಗೆ 3 ಕಂತು ಸೇರಿ ಶೇ. 28 ಕ್ಕೆ ಡಿಎ ಹೆಚ್ಚಳ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರಿಗೆ ಭರ್ಜರಿ ಬಂಪರ್ ಕೊಡುಗೆ: ಒಟ್ಟಿಗೆ 3 ಕಂತು ಸೇರಿ ಶೇ. 28 ಕ್ಕೆ ಡಿಎ ಹೆಚ್ಚಳ..?

 ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿಭತ್ಯೆ(DA)ಯನ್ನು ಹೆಚ್ಚಳ ಮಾಡಲಾಗಿದ್ದು, ಹೋಳಿ ಹಬ್ಬದ ಕೊಡುಗೆಯಾಗಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವುದನ್ನು ತಡೆಹಿಡಿಯಲಾಗಿತ್ತು. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳ ಮಾಡಿ ಹೋಳಿ ಹಬ್ಬದ ಕೊಡುಗೆಯಾಗಿ ನೀಡಲಾಗುವುದು.

ಕೊರೋನಾದಿಂದಾಗಿ ಡಿಎ ಬಿಡುಗಡೆ ಮಾಡಿರಲಿಲ್ಲ. ಶೇಕಡ 17 ರಷ್ಟು ಡಿಎ ಪಡೆಯುತ್ತಿರುವ ನೌಕರರು, ಪಿಂಚಣಿದಾರರಿಗೆ ತಡೆಹಿಡಿಯಲಾಗಿದ್ದ 3 ಸಲದ ಡಿಎಯನ್ನು ಒಟ್ಟಿಗೆ ನೀಡಲಾಗುವುದು. 2020 ರ ಜನವರಿ 1(ಶೇ.3), ಜುಲೈ 1(ಶೇ.4) ಮತ್ತು 2021 ರ ಜನವರಿ 1(ಶೇ.4) ರ ಡಿಎ ಒಟ್ಟಿಗೆ ಬಿಡುಗಡೆಯಾಗಲಿದೆ. ಶೇಕಡ 17 ರಷ್ಟು ಇರುವ ಡಿಎ ಶೇ 3, ಶೇ.4, ಶೇ.4 ರಷ್ಟು ಏರಿಕೆಯಾಗಿ ಶೇಕಡ 28 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...