ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ತುಟ್ಟಿಭತ್ಯೆ(DA)ಯನ್ನು ಹೆಚ್ಚಳ ಮಾಡಲಾಗಿದ್ದು, ಹೋಳಿ ಹಬ್ಬದ ಕೊಡುಗೆಯಾಗಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ನೀಡುವುದನ್ನು ತಡೆಹಿಡಿಯಲಾಗಿತ್ತು. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಹೆಚ್ಚಳ ಮಾಡಿ ಹೋಳಿ ಹಬ್ಬದ ಕೊಡುಗೆಯಾಗಿ ನೀಡಲಾಗುವುದು.
ಕೊರೋನಾದಿಂದಾಗಿ ಡಿಎ ಬಿಡುಗಡೆ ಮಾಡಿರಲಿಲ್ಲ. ಶೇಕಡ 17 ರಷ್ಟು ಡಿಎ ಪಡೆಯುತ್ತಿರುವ ನೌಕರರು, ಪಿಂಚಣಿದಾರರಿಗೆ ತಡೆಹಿಡಿಯಲಾಗಿದ್ದ 3 ಸಲದ ಡಿಎಯನ್ನು ಒಟ್ಟಿಗೆ ನೀಡಲಾಗುವುದು. 2020 ರ ಜನವರಿ 1(ಶೇ.3), ಜುಲೈ 1(ಶೇ.4) ಮತ್ತು 2021 ರ ಜನವರಿ 1(ಶೇ.4) ರ ಡಿಎ ಒಟ್ಟಿಗೆ ಬಿಡುಗಡೆಯಾಗಲಿದೆ. ಶೇಕಡ 17 ರಷ್ಟು ಇರುವ ಡಿಎ ಶೇ 3, ಶೇ.4, ಶೇ.4 ರಷ್ಟು ಏರಿಕೆಯಾಗಿ ಶೇಕಡ 28 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.