alex Certify 79 ಮಕ್ಕಳನ್ನು ಬಲಿ ಪಡೆದ ರಷ್ಯಾ- ಉಕ್ರೇನ್​ ಯುದ್ಧ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

79 ಮಕ್ಕಳನ್ನು ಬಲಿ ಪಡೆದ ರಷ್ಯಾ- ಉಕ್ರೇನ್​ ಯುದ್ಧ….!

ಫೆಬ್ರವರಿ 24ರಿಂದ ರಷ್ಯಾವು ಉಕ್ರೇನ್​ನ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಅಂದಿನಿಂದ ಇಲ್ಲಿಯವರೆಗೆ ಉಕ್ರೇನ್​ನಲ್ಲಿ 79 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ 100 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅದರಲ್ಲೂ ಹೆಚ್ಚಾಗಿ ಕೀವ್​, ಖಾರ್ಕಿವ್​, ಡೊನೆಟ್ಸ್ಕ್​​, ಸುನಿ, ಖೆರ್ಸೋನ್​ ಹಾಗೈ ಝೈಟೋಮಿರ್​​ ಪ್ರದೇಶಗಳಿಗೆ ಸೇರಿದ ಮಕ್ಕಳೇ ರಷ್ಯಾ ಪಡೆಯ ದಾಳಿಗೆ ಬಲಿಯಾಗುತ್ತಿದ್ದಾರೆ. ರಷ್ಯಾದ ಪಡೆಗಳು ನಡೆಸುವ ಶೆಲ್​ ದಾಳಿಗಳಿಂದಾಗಿ ಮಕ್ಕಳ ಸಾವಿನ ಸಂಖ್ಯೆಗಳನ್ನು ನಿಖರವಾಗಿ ಹೇಳುವುದೂ ಕೂಡ ಕಷ್ಟಕರವಾಗಿದೆ.

ಇಲ್ಲಿಯವರೆಗೆ 280ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಧ್ವಂಸ ಮಾಡಲಾಗಿದೆ. ಇದರಲ್ಲಿ 9 ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಡೊನೆಟ್ಸ್ಕ್​ ಭಾಗದಲ್ಲಿ 110 ಶಿಕ್ಷಣ ಸಂಸ್ಥೆಗಳು ಹಾನಿಗೊಳಗಾಗಿವೆ. ಸುಮಿಯಲ್ಲಿ 28, ಕೀವ್​ನಲ್ಲಿ 17 ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ.

ಒಂದು ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ರಷ್ಯಾದ ಪಡೆಯು ಪ್ರತಿನಿತ್ಯ ಉಕ್ರೇನ್​ನಲ್ಲಿ 17 ಶಿಕ್ಷಣ ಸಂಸ್ಥೆಗಳನ್ನು ಧ್ವಂಸಗೊಳಿಸುತ್ತಿದೆ. ಇದರ ಪರಿಣಾವಾಗಿ 79 ಮಿಲಿಯನ್​​ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...