ಫೆಬ್ರವರಿ 24ರಿಂದ ರಷ್ಯಾವು ಉಕ್ರೇನ್ನ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಅಂದಿನಿಂದ ಇಲ್ಲಿಯವರೆಗೆ ಉಕ್ರೇನ್ನಲ್ಲಿ 79 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ 100 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಹೆಚ್ಚಾಗಿ ಕೀವ್, ಖಾರ್ಕಿವ್, ಡೊನೆಟ್ಸ್ಕ್, ಸುನಿ, ಖೆರ್ಸೋನ್ ಹಾಗೈ ಝೈಟೋಮಿರ್ ಪ್ರದೇಶಗಳಿಗೆ ಸೇರಿದ ಮಕ್ಕಳೇ ರಷ್ಯಾ ಪಡೆಯ ದಾಳಿಗೆ ಬಲಿಯಾಗುತ್ತಿದ್ದಾರೆ. ರಷ್ಯಾದ ಪಡೆಗಳು ನಡೆಸುವ ಶೆಲ್ ದಾಳಿಗಳಿಂದಾಗಿ ಮಕ್ಕಳ ಸಾವಿನ ಸಂಖ್ಯೆಗಳನ್ನು ನಿಖರವಾಗಿ ಹೇಳುವುದೂ ಕೂಡ ಕಷ್ಟಕರವಾಗಿದೆ.
ಇಲ್ಲಿಯವರೆಗೆ 280ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಧ್ವಂಸ ಮಾಡಲಾಗಿದೆ. ಇದರಲ್ಲಿ 9 ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಡೊನೆಟ್ಸ್ಕ್ ಭಾಗದಲ್ಲಿ 110 ಶಿಕ್ಷಣ ಸಂಸ್ಥೆಗಳು ಹಾನಿಗೊಳಗಾಗಿವೆ. ಸುಮಿಯಲ್ಲಿ 28, ಕೀವ್ನಲ್ಲಿ 17 ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ.
ಒಂದು ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ರಷ್ಯಾದ ಪಡೆಯು ಪ್ರತಿನಿತ್ಯ ಉಕ್ರೇನ್ನಲ್ಲಿ 17 ಶಿಕ್ಷಣ ಸಂಸ್ಥೆಗಳನ್ನು ಧ್ವಂಸಗೊಳಿಸುತ್ತಿದೆ. ಇದರ ಪರಿಣಾವಾಗಿ 79 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.