alex Certify ಪ. ಬಂಗಾಳದ ಶೇ. 78.9 ರಷ್ಟು ಕುಟುಂಬದ ಬಳಿ ಇದೆ ಸೈಕಲ್…! ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ. ಬಂಗಾಳದ ಶೇ. 78.9 ರಷ್ಟು ಕುಟುಂಬದ ಬಳಿ ಇದೆ ಸೈಕಲ್…! ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಬಹಿರಂಗ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಟಿಸಿರೋ ವರದಿಯ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಶೇಕಡಾ 78.9ರಷ್ಟು ಕುಟುಂಬ ಸೈಕಲ್ ಹೊಂದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಸೈಕಲ್ ಹೊಂದಿದ ರಾಜ್ಯವಾಗಿದೆ. ಇನ್ನು ಉತ್ತರ ಪ್ರದೇಶ ಶೇಕಡಾ 75. 6 ಹೊಂದಿದ್ದು ಇದು ಎರಡನೇ ಸ್ಥಾನದಲ್ಲಿದೆ. ಇದೇ ಸಮೀಕ್ಷೆ ವರದಿ ಪ್ರಕಾರ ದೇಶದಲ್ಲಿ ಸರಾಸರಿ 50.4 ಪ್ರತಿಶತ ಕುಟುಂಬಗಳು ಸೈಕಲ್‌ಗಳನ್ನ ಹೊಂದಿದೆ ಎಂದು ತಿಳಿಸಿದೆ.

NFHS ನ 2019-22ರ ವರದಿ ಪ್ರಕಾರ ಒಡಿಶಾದಲ್ಲಿ ಶೇಕಡಾ 72.5, ಛತ್ತಿಸ್‌ಗಢ್‌ನಲ್ಲಿ ಶೇಕಡಾ 70.8 ಅಸ್ಸಾಂನಲ್ಲಿ ಶೇಕಡಾ 70.3, ಪಂಜಾಬ್‌ನಲ್ಲಿ ಶೇಕಡಾ 67.8, ಜಾರ್ಖಂಡ್‌ನಲ್ಲಿ ಶೇಕಡಾ 66.3 ಮತ್ತು ಬಿಹಾರ್‌ನಲ್ಲಿ ಶೇಕಡಾ 64.8ರಷ್ಟು ಕುಟುಂಬಗಳು ಸೈಕಲ್‌ಗಳನ್ನ ಹೊಂದಿವೆ.

ಮೊಬೈಲ್‌ ಬಳಕೆದಾರರೇ ಎಚ್ಚರ: ಮತ್ತೆ ವಕ್ಕರಿಸಿದೆ ʼಜೋಕರ್ʼ ಮಾಲ್ವೇರ್

ನಾಗಾಲ್ಯಾಂಡ್‌ನಲ್ಲಿ ಶೇಕಡಾ 5.5ರಷ್ಟು ಮಾತ್ರ ಕುಟುಂಬಗಳು ಸೈಕಲ್‌ಗಳನ್ನ ಹೊಂದಿವೆ. ಸಿಕ್ಕಿಂನಲ್ಲೂ ಕೂಡಾ ಶೇಕಡಾ 5.9ರಷ್ಟು ಸೈಕಲ್‌ಗಳಿವೆ ಅಂತ ಈ ವರದಿ ಹೇಳಿದೆ. ಅದೇ ರೀತಿ ಗುಜರಾತ್‌ನಲ್ಲಿ ಶೇಕಡಾ 29.9 ಮತ್ತು ದೆಹಲಿಯಲ್ಲಿ ಶೇಕಡಾ 27.2 ಪ್ರತಿಶತ ಕುಟುಂಬಗಳು ಸೈಕಲ್‌ನ್ನ ಹೊಂದಿವೆ.

ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಮಾಡಿರೋ ‘ಸಬೂಜ್ ಸಾಥಿ‘ ಅನ್ನೊ ಯೋಜನೆಯಿಂದಾಗಿ ಈ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಜೊತೆಗೆ ಈ ಯೋಜನೆಯಡಿಯಲ್ಲಿ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲಾಗುತ್ತದೆ. ಈ ಸೈಕಲ್‌ಗಳಿಂದ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಕುಟುಂಬದವರಿಗೂ ಉಪಯುಕ್ತವಾಗಿವೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...