alex Certify ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ಪ್ರಪಾತಕ್ಕೆ ಬಿದ್ದು 7 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿದ್ದ ಟೆಂಪೋ ಟ್ರಾವೆಲರ್ ಪ್ರಪಾತಕ್ಕೆ ಬಿದ್ದು 7 ಜನ ಸಾವು

ಹಿಮಾಚಲ ಪ್ರದೇಶದ ಕುಲುವಿನಲ್ಲಿ ವಾಹನ ಕಮರಿಗೆ ಬಿದ್ದು 7 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಕುಲು ಜಿಲ್ಲೆಯ ಬಂಜಾರ್ ಉಪವಿಭಾಗದ ಘಿಯಾಘಿ ಬಳಿ ಟೆಂಪೋ ಟ್ರಾವೆಲರ್ ಕಮರಿಗೆ ಬಿದ್ದು ಅಪಘಾತ ಸಂಭವಿಸಿದೆ.

ಭಾನುವಾರ ರಾತ್ರಿ 8:30 ಕ್ಕೆ ಪ್ರವಾಸಿ ವಾಹನವು ಬಂಡೆಯಿಂದ ಕೆಳಕ್ಕೆ ಉರುಳಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಐವರು ಗಾಯಾಳುಗಳನ್ನು ಕುಲು ವಲಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕುಲು ಎಸ್‌.ಪಿ. ಗುರುದೇವ್ ಸಿಂಗ್ ತಿಳಿಸಿದ್ದಾರೆ.

ಬಂಜಾರ್‌ ಬಿಜೆಪಿ ಶಾಸಕ ಸುರೇಂದರ್ ಶೌರಿ ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಅಪಘಾತದಲ್ಲಿ ಬಲಿಯಾದವರು ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಮತ್ತು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳವರಾಗಿದ್ದು, ಅವರನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕತ್ತಲೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಮತ್ತು ಸ್ಥಳೀಯರಿಗೆ ಶೌರಿ ಧನ್ಯವಾದ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...