alex Certify ಒಮಿಕ್ರಾನ್ ಭೀತಿ, ಪ್ರಯಾಣಿಕರಿಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿದ ದೇಶಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಭೀತಿ, ಪ್ರಯಾಣಿಕರಿಗೆ ಬೂಸ್ಟರ್ ಡೋಸ್ ಕಡ್ಡಾಯ ಮಾಡಿದ ದೇಶಗಳು

ಪ್ರಯಾಣ ಮಾಡುವುದು ಯಾರಿಗೆ ಇಷ್ಟವಿಲ್ಲ ಹೇಳಿ, ಆದ್ರೆ ಈ ಕೊರೋನಾ ಸಾಂಕ್ರಾಮಿಕ ರೋಗದಿಂದ ಟ್ರಾವೆಲಿಂಗ್ ಗೆ ಕೊಕ್ಕೆ ಬಿದ್ದಿದೆ. ಒಂದು ವೇಳೆ ಪ್ರಯಾಣಕ್ಕೆ ಸಿದ್ಧರಾಗಿದ್ದರು ಹಲವು ದೇಶಗಳು ತಮ್ಮ ದೇಶಕ್ಕೆ ಬರುವ ಟ್ರಾವೆಲರ್ಸ್ ಗೆ ಸಾಕಷ್ಟು ನಿಯಮಗಳನ್ನ ಹೇರಿದೆ‌.

ಒಮಿಕ್ರಾನ್ ಹಾಗೂ ಕೊರೋನಾ ಹೆಚ್ಚಳದಿಂದ ಹಲವು ದೇಶಗಳಲ್ಲಿ ಹೊಸ ಅಲೆಗಳೆ ಶುರುವಾಗಿದೆ. ನೆಗೆಟಿವ್ ರಿಪೋರ್ಟ್ ನಿಂದ ಹಿಡಿದು ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ನೀಡಿದ್ರೆ ಮಾತ್ರ ವಿದೇಶಕ್ಕೆ ಪ್ರಯಾಣಿಸುವ ಅವಕಾಶವಿದೆ. ಈಗ ಈ ನಿಯಮಕ್ಕೆ ಮತ್ತೊಂದು ಕಡ್ಡಾಯ ನಿಯಮ ಸೇರಿಕೊಂಡಿದ್ದು ಈ ಏಳು ದೇಶಗಳು ಬೂಸ್ಟರ್ ಶಾಟ್ ಪಡೆದವರನ್ನ ಮಾತ್ರ ತಮ್ಮ ದೇಶಕ್ಕೆ ಬರಲು ಅವಕಾಶ ನೀಡುತ್ತಿವೆ.

ಪ್ರಯಾಣಿಕರಿಗೆ ಬೂಸ್ಟರ್ ಶಾಟ್ ಕಡ್ಡಾಯಗೊಳಿಸಿದ ದೇಶಗಳ ಪಟ್ಟಿ.

1. ಫ್ರಾನ್ಸ್: ಈ ದೇಶಕ್ಕೆ ಹೋಗಬೇಕಾದರೆ 65ವರ್ಷ ಮೇಲ್ಪಟ್ಟವರು ಬೂಸ್ಟರ್ ಶಾಟ್ ಗಳನ್ನ ಪಡೆದಿರಲೆಬೇಕು.‌ ಬೂಸ್ಟರ್ ಪಡೆಯದ ಪ್ರಯಾಣಿಕರು ಹಾಗೂ ಆ ದೇಶದ ಪ್ರಜೆಗಳನ್ನ ಸಹ ಲಸಿಕೆ ಪಡೆಯದವರೆಂದೆ ಗುರುತಿಸಲಾಗುತ್ತದೆ. ಬೂಸ್ಟರ್ ಪಡೆದಿಲ್ಲವಾದರು ಫ್ರಾನ್ಸ್ ದೇಶಕ್ಕೆ ಪ್ರಯಾಣಿಸಬಹುದು ಆದರೆ ಅಲ್ಲಿನ ಹಲವು ಮುಖ್ಯ ಪ್ರದೇಶಗಳೊಳಗೆ ಬೂಸ್ಟರ್ ಡೋಸ್ ಪಡೆಯದವರಿಗೆ ಅವಕಾಶ ನೀಡುತ್ತಿಲ್ಲ.

2. ನೆದರ್ ಲ್ಯಾಂಡ್: ಫೆಬ್ರವರಿ ತಿಂಗಳಿಂದ ಬೂಸ್ಟರ್ ಲಸಿಕೆ ಪಡೆಯದ ಪ್ರಯಾಣಿಕರಿಗೆ ದೇಶದೊಳಗೆ ಅವಕಾಶವಿಲ್ಲ. ಬೂಸ್ಟರ್ ಡೋಸ್ ಪಡೆಯದ ಇಲ್ಲಿನ ನಾಗರಿಕರ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಗಳನ್ನ ರದ್ದುಗೊಳಿಸಲಾಗುತ್ತದೆ ಎಂದು ನೆದರ್ ಲ್ಯಾಂಡ್ ನ ಆರೋಗ್ಯ ಮಂತ್ರಿ ತಿಳಿಸಿದ್ದಾರೆ‌.

3. ಕುವೈತ್: 2021, ಡಿಸೆಂಬರ್ 26ರಿಂದಲೆ ಈ ದೇಶಕ್ಕೆ ವಿಸಿಟ್ ಮಾಡುವ ಪ್ರಯಾಣಿಕರು ಬೂಸ್ಟರ್ ಡೋಸ್ ಪಡೆದಿರಬೇಕು ಎಂದು ಆದೇಶ ಹೊರಡಿಸಲಾಗಿದೆ.

4. ಇಸ್ರೇಲ್: ಪೂರ್ತಿ ಲಸಿಕೆ ಪಡೆದ 180 ದಿನದ ನಂತರವು ಬೂಸ್ಟರ್ ಡೋಸ್ ಪಡೆಯದ ಪ್ರಯಾಣಿಕರಿಗೆ ಇಸ್ರೇಲ್ ದೇಶಕ್ಕೆ ಅವಕಾಶವಿಲ್ಲ. ಅಲ್ಲದೇ ಇಸ್ರೇಲ್ ಅಲ್ಲಿನ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನಾಲ್ಕನೇ ಡೋಸ್ ಸಹ ನೀಡುತ್ತಿದೆ.

5. ಕ್ರೊಯೇಷಿಯ: ಈ ದೇಶದಲ್ಲಿ ಒಂದು ವರ್ಷದ ಹಳೆಯ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಗಳನ್ನ ಅಮಾನ್ಯ ಎಂದು ಗುರುತಿಸಲಾಗುತ್ತಿದೆ. ಅಂದರೆ 2021 ರ ವರ್ಷಾರಂಭದಲ್ಲಿ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಪಡೆಯದಿದ್ದರೆ ಈ ದೇಶಕ್ಕೆ ಕಾಲಿಡಲು ಸಾಧ್ಯವಿಲ್ಲ.

6. ಗ್ರೀಸ್: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿರೊ ಗ್ರೀಸ್ ಸರ್ಕಾರ, ಪ್ರಯಾಣಿಕರು ಹಾಗೂ ಅಲ್ಲಿನ ನಾಗರಕರಿಗು ವ್ಯಾಕ್ಸಿನ್ ಕಡ್ಡಾಯ ಮಾಡಿದೆ. ಮುಂದಿನ ತಿಂಗಳಿಂದ ಈ ದೇಶಕ್ಕೆ ವಿಸಿಟ್ ಕೊಡಬೇಕೆಂದರೆ ಬೂಸ್ಟರ್ ಡೋಸ್ ಪಡೆದಿರಲೆಬೇಕು ಎಂದು ವರದಿಯಾಗಿದೆ.

7. ಆಸ್ಟ್ರಿಯಾ: ಲಸಿಕೆಯ ಎರಡನೇ ಡೋಸ್ ಪಡೆದ ಒಂಭತ್ತು ತಿಂಗಳಿಗೆ ಅದರ ಪ್ರಭಾವ ಮುಗಿಯುತ್ತದೆ ಎಂದು ಕಳೆದ ನವೆಂಬರ್ ನಲ್ಲೆ ಆಸ್ಟ್ರಿಯಾ ಬೂಸ್ಟರ್ ಡೋಸ್ ಗಳನ್ನ ಪರಿಚಯಿಸಿದೆ. ಒಂದು ವೇಳೆ ನೀವು ಸೆಕೆಂಡ್ ಡೋಸ್ ಪಡೆದು ಒಂಭತ್ತು ತಿಂಗಳಾಗಿದ್ದು, ಹೊಸ ಡೋಸ್ ಪಡೆಯದೆ ಆಸ್ಟ್ರಿಯಾಗೆ ಪ್ರಯಾಣಿಸಲು ಸಾಧ್ಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...