alex Certify ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾರಾಷ್ಟ್ರದ ಸಿಬಿಐ ಕಚೇರಿಯಲ್ಲಿ ಕೊರೋನಾ ಸ್ಪೋಟ, 68 ಸಿಬ್ಬಂದಿಯಲ್ಲಿ ಸೋಂಕು ದೃಢ….!

ಮಹಾರಾಷ್ಟ್ರದ ಪರಿಸ್ಥಿತಿ ಕೊರೋನಾ ವೈರಸ್ ನಿಂದ ಬಿಗಡಾಯಿಸುತ್ತಿದೆ. ದಿನಕ್ಕೆ ಸಾವಿರಾರು ಕೇಸ್ ಗಳು ವರದಿಯಾಗುತ್ತಿದ್ದು, ಕೋವಿಡ್ ಕೈಗೆ ಸಿಗದಷ್ಟು ವೇಗವಾಗಿ ಸಾಗುತ್ತಿದೆ. ಇಂದು ಮುಂಬೈನ ಕೇಂದ್ರೀಯ ತನಿಖಾ ಸಂಸ್ಥೆಯ(CBI) 68 ಉದ್ಯೋಗಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಕೇಂದ್ರ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) 68 ಉದ್ಯೋಗಿಗಳು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಬಿಕೆಸಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 235 ಜನರನ್ನು ಪರೀಕ್ಷಿಸಲು ಸಿಬಿಐ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ಗೆ (BMC) ಮನವಿ ಮಾಡಿಕೊಂಡಿತ್ತು.‌

ಬಿಎಂಸಿ ನಡೆಸಿದ ಪರೀಕ್ಷೆಯಲ್ಲಿ 235 ಜನರಲ್ಲಿ 68 ಮಂದಿಗೆ ಕೊರೋನಾ ವೈರಸ್ ದೃಢವಾಗಿದ್ದು, ಸೋಂಕಿತರಲ್ಲಿ ಸಿಬಿಐನ ಅಧಿಕಾರಿಗಳು ಇದ್ದಾರೆ ಎಂದು ವರದಿಯಾಗಿದೆ. ಸಧ್ಯ ಸೋಂಕಿತರೆಲ್ಲರು ಹೋಮ್ ಕ್ವಾರಂಟೈನ್ ನಲ್ಲಿದ್ದಾರೆಂದು ತಿಳಿದುಬಂದಿದೆ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...