ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ ಮುಂದುವರೆದ ದೇಶಗಳಿಗೂ ಠಕ್ಕರ್ ಕೊಡ್ತಿದೆ. ಇತ್ತೀಚೆಗೆ 137 ಕೋಟಿ ಡೋಸ್ ವ್ಯಾಕ್ಸಿನ್ ಹಂಚಿದ ಹೆಮ್ಮೆ ಭಾರತಕ್ಕಿದೆ.
ಈ ಸಾಧನೆ ಇಲ್ಲಿಗೆ ನಿಲ್ಲದೆ, ವ್ಯಾಕ್ಸಿನೇಷನ್ ಪಡೆಯಲು ಅರ್ಹರಾದ 60% ಜನರು ಮೊದಲ ಮತ್ತು ಎರಡನೇ ಡೋಸ್ ಪಡೆದು ಸಂಪೂರ್ಣವಾಗಿ ವ್ಯಾಕ್ಸಿನೇಟ್ ಆಗಿದ್ದಾರೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಕ್ ಮಾಂಡವೀಯ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವ್ಯಾಕ್ಸಿನ್ ಪಡೆದ ಎಲ್ಲಾ ಭಾರತೀಯರನ್ನ ಅಭಿನಂದಿಸಿದ್ದಾರೆ. ಜೊತೆಗೆ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಸದಾ ಮುಂದಿದ್ದು, ಗಲ್ಲಿಗಲ್ಲಿಗೆ ಹೋಗಿ ವ್ಯಾಕ್ಸಿನ್ ಹಂಚಿದ ಆರೋಗ್ಯ ಕಾರ್ಯಕರ್ತರ ನಿಸ್ವಾರ್ಥ ಸೇವೆಯನ್ನ ನೆನೆಸಿದ್ದಾರೆ.
ʼಪಮಾಮ ಪೇಪರ್ಸ್ʼ ವಿಚಾರಣೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈ ಮೊದಲ ಪೋಸ್ಟ್
ಒಮಿಕ್ರಾನ್ ಭಾರತಕ್ಕೆ ಕಾಲಿಟ್ಟ ಮೇಲೆ ವ್ಯಾಕ್ಸಿನ್ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ದಿನೇ ದಿನೇ ಹೆಚ್ಚುತ್ತಿರುವ ಹೊಸತಳಿಯ ಸೋಂಕು ಇಡೀ ದೇಶಕ್ಕೆ ತಲೆನೋವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಸೋಂಕನ್ನ ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಇಂದು ಭಾರತ ಕೊರೊನಾ ಸ್ಥಿತಿಗತಿ ಬಗ್ಗೆ ಸಭೆ ನಡೆಸಲಿದ್ದಾರೆ.