alex Certify ದುಡ್ಡಿನ ಆಸೆಗಾಗಿ 90 ಲಸಿಕೆಗಳನ್ನು ಸ್ವೀಕರಿಸಿದ 60ರ ವೃದ್ಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡ್ಡಿನ ಆಸೆಗಾಗಿ 90 ಲಸಿಕೆಗಳನ್ನು ಸ್ವೀಕರಿಸಿದ 60ರ ವೃದ್ಧ..!

ಕೊರೊನಾ ಲಸಿಕೆಗಳನ್ನು ಹಾಕಿಕೊಳ್ಳಲು ಇಷ್ಟಪಡದವರಿಗೆ ನಕಲಿ ವ್ಯಾಕ್ಸಿನ್​ ಪ್ರಮಾಣ ಪತ್ರವನ್ನು ಮಾರಾಟ ಮಾಡಲು 60 ವರ್ಷದ ವೃದ್ಧರೊಬ್ಬರು ಜರ್ಮನಿಯಲ್ಲಿ 90 ಲಸಿಕೆಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ಜರ್ಮನಿಯ ನಗರವಾದ ಮ್ಯಾಗ್ಡೆಬರ್ಗ್​ನ ವ್ಯಕ್ತಿ ಇವರಾಗಿದ್ದು ಜರ್ಮನ್​ ಗೌಪ್ಯತೆಯ ನಿಯಮಗಳಿಗೆ ಅನುಗಣವಾಗಿ ಹೆಸರನ್ನು ಬಹಿರಂಗಪಡಿಸಿಲ್ಲ. ಪೊಲೀಸರ ಕೈಗೆ ಸಿಕ್ಕಿಬೀಳದೆ ಸ್ಯಾಕ್ಸೋನಿಯ ಲಸಿಕಾ ಕೇಂದ್ರಗಳಲ್ಲಿ ಕೋವಿಡ್​ 19ನ 90 ಡೋಸ್​ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.

ಶಂಕಿತನನ್ನು ಬಂಧಿಸಲಾಗಿಲ್ಲ. ಆದರೆ ಲಸಿಕೆ ಪ್ರಮಾಣ ಪತ್ರಗಳನ್ನು ಅನಧಿಕೃತವಾಗಿ ವಿತರಣೆ ಮಾಡಿದ ಸಲುವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಸತತ 2ನೇ ದಿನ ಕೋವಿಡ್​​ 19 ಡೋಸ್​ ಪಡೆಯಲು ಹೋದಾಗ ಸ್ಯಾಕ್ಸೋನಿಯ ಐಲೆನ್​ ಬರ್ಗ್​ನಲ್ಲಿರುವ ಲಸಿಕಾ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಈ ವ್ಯಕ್ತಿಯ ಕೈನಿಂದ ಹಲವಾರು ನಕಲಿ ಲಸಿಕೆ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕ್ರಿಮಿನಲ್​​ ಮೊಕದ್ದಮೆಯನ್ನು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...