alex Certify SHOCKING NEWS: ಕವರ್ ಸಮೇತ ಚಾಕಲೇಟ್ ನುಂಗಿದ ಬಾಲಕಿ; ಗಂಟಲಲ್ಲಿ ಸಿಲುಕಿ ದಾರುಣ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕವರ್ ಸಮೇತ ಚಾಕಲೇಟ್ ನುಂಗಿದ ಬಾಲಕಿ; ಗಂಟಲಲ್ಲಿ ಸಿಲುಕಿ ದಾರುಣ ಸಾವು

ಉಡುಪಿ: 6 ವರ್ಷದ ಬಾಲಕಿಯೊಬ್ಬಳು ಕವರ್ ಸಮೇತ ಚಾಕಲೇಟ್ ನುಂಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಬಳಿ ನಡೆದಿದೆ.

ಮೃತ ಬಾಲಕಿ 6 ವರ್ಷದ ಸಮನ್ವಿ ಎಂದು ಗುರುತಿಸಲಾಗಿದ್ದು, ವಿವೇಕಾನಂದ ಆಂಗ್ಲ ಮಾಧ್ಯಮ ಉಪ್ಪುಂದ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.

ಬೆಳಿಗ್ಗೆ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಿದ್ದ ಬಾಲಕಿಗೆ ಆಕೆಯ ತಾಯಿ ಚಾಕಲೇಟ್ ನೀಡಿ ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದರು. ಶಾಲಾ ಬಸ್ ಗಾಗಿ ಕಾಯುತ್ತಾ ಚಾಕಲೇಟ್ ಕವರ್ ಸಮೇತವಾಗಿ ಸಮನ್ವಿ ಚಾಕಲೇಟ್ ತಿಂದಿದ್ದಾಳೆ. ಚಾಕಲೆಟ್ ಕವರ್ ಗಂಟಲಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...