alex Certify BIG NEWS: 7 ಬಿಜೆಪಿ ಸಂಸದರು ಮಮತಾ ಪಕ್ಷಕ್ಕೆ ಸೇರ್ಪಡೆ: ಸಚಿವ ಜ್ಯೋತಿಪ್ರಿಯ ಮಲ್ಲಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 7 ಬಿಜೆಪಿ ಸಂಸದರು ಮಮತಾ ಪಕ್ಷಕ್ಕೆ ಸೇರ್ಪಡೆ: ಸಚಿವ ಜ್ಯೋತಿಪ್ರಿಯ ಮಲ್ಲಿಕ್

ಕೊಲ್ಕತ್ತಾ: 6 -7 ಬಿಜೆಪಿ ಸಂಸದರು ಶೀಘ್ರದಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜ್ಯೋತಿಪ್ರಿಯ ಮಲ್ಲಿಕ್ ತಿಳಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಹಬ್ರಾದಲ್ಲಿ ಸ್ವಾಮಿ ವಿವೇಕಾನಂದರ 152 ನೇ ಜನ್ಮದಿನಾಚರಣೆ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಮೇ ತಿಂಗಳಿಗಿಂತ ಮೊದಲೇ 7 ಮಂದಿ ಸಂಸದರು ಟಿಎಂಸಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಕ್ಷೇತ್ರದ ಶಾಸಕ ಮತ್ತು ಸಚಿವರಾದ ಜ್ಯೋತಿಪ್ರಿಯ ಮಲ್ಲಿಕ್, 7 ಮಂದಿ ಬಿಜೆಪಿ ಸಂಸದರು ಟಿಎಂಸಿಗೆ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗೆ ಬಿಜೆಪಿ ಸೇರಿದ ಸುವೆಂದು ಅಧಿಕಾರಿ ಕೂಡ ಕೆಲವು ದಿನಗಳ ನಂತರ ಪಕ್ಷಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...