
ಗರ್ಭಾವಸ್ಥೆಯನ್ನು ತಪ್ಪಿಸಲಿಕ್ಕೋಸ್ಕರ ಕಾಂಡೋಮ್ ಬಳಕೆ ಮಾಡಲಾಗುತ್ತೆ. ಆದರೆ ಕೆಲವೊಮ್ಮೆ ನೀವು ಕಾಂಡೋಮ್ ಬಳಕೆ ಮಾಡಿದ ಬಳಿಕವೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್ ಹಾನಿಯಾಗುವ ಅಥವಾ ಜಾರಿ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಲೈಂಗಿಕ ಕ್ರಿಯೆಯ ವೇಳೆ ಶಿಶ್ನದಿಂದ ಕಾಂಡೋಮ್ಗಳು ಜಾರಿ ಹೋಗಬಹುದು. ಯೋನಿಯ ಒಳಗೆ ಕಾಂಡೋಮ್ಗಳು ಒಡೆದು ಹೋಗುವ ಸಾಧ್ಯತೆ ಕೂಡ ಇರುತ್ತದೆ. ಒಂದು ವೇಳೆ ಮಹಿಳೆಯರು ಕಾಂಡೋಮ್ಗಳನ್ನು ಬಳಕೆ ಮಾಡುತ್ತಿದ್ದಲ್ಲಿ ಕಾಂಡೋಮ್ ಹಾಗೂ ಯೋನಿಯ ನಡುವೆ ಶಿಶ್ನ ಜಾರಿ ಬಿಡಬಹುದು. ಈ ಸಂದರ್ಭಗಳಲ್ಲಿಯೂ ಗರ್ಭಾವಸ್ಥೆಯ ಅಪಾಯ ಹೆಚ್ಚಿರುತ್ತದೆ.
ಪುರುಷರು ಕಾಂಡೋಮ್ಗಳನ್ನು ಹೇಗೆ ಬಳಸಬೇಕು..?
ಕಾಂಡೋಮ್ಗಳನ್ನು ಆಯ್ಕೆ ಮಾಡುವ ಮುನ್ನ ಅವುಗಳ ಅಳತೆ ಹಾಗೂ ಗುಣಮಟ್ಟವನ್ನು ಮೊದಲು ಪರೀಕ್ಷೆ ಮಾಡಿಕೊಳ್ಳಿ.
ನೀವು ಸರಿಯಾಗಿ ಬಳಕೆ ಮಾಡಿದಲ್ಲಿ ಕಾಂಡೋಮ್ಗಳು ಭಾಗಶಃ ಗರ್ಭಾವಸ್ಥೆಯ ಅಪಾಯವನ್ನು ತಡೆಯುತ್ತದೆ.
ಕಾಂಡೋಮ್ಗಳನ್ನು ಬಳಕೆ ಮಾಡುವ ಮುನ್ನ ಅದರಲ್ಲಿ ರಂಧ್ರ ಇದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಕಾಂಡೋಮ್ ಶಿಶ್ನದ ಅಳತೆಗೆ ತಕ್ಕಂತೆ ಹಾಕಿಕೊಳ್ಳಿ.