alex Certify 6 ಸಾವಿರ ಕೋಟಿ ರೂ. ಮೌಲ್ಯದ ಮನೆ, ಖಾಸಗಿ ಜೆಟ್, ದುಬಾರಿ ವಿಹಾರ ನೌಕೆಗಳು; ದಂಗಾಗಿಸುವಂತಿದೆ ಭಾರತದ ಈ ಉದ್ಯಮಿ ಆಸ್ತಿ ಮೌಲ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಸಾವಿರ ಕೋಟಿ ರೂ. ಮೌಲ್ಯದ ಮನೆ, ಖಾಸಗಿ ಜೆಟ್, ದುಬಾರಿ ವಿಹಾರ ನೌಕೆಗಳು; ದಂಗಾಗಿಸುವಂತಿದೆ ಭಾರತದ ಈ ಉದ್ಯಮಿ ಆಸ್ತಿ ಮೌಲ್ಯ…!

ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಗೌತಮ್ ಸಿಂಘಾನಿಯಾ ತಮ್ಮ ಐಷಾರಾಮಿ ಜೀವನಶೈಲಿಗಾಗಿ ಯಾವಾಗಲೂ ಗುರ್ತಿಸಿಕೊಳ್ಳುತ್ತಾರೆ. ಅವರ ನಿವ್ವಳ ಮೌಲ್ಯ USD 1.4 ಶತಕೋಟಿ ಎಂದು ಅಂದಾಜಿಸಲಾಗಿದೆ.

ಸಿಂಘಾನಿಯಾ ಅವರು ಐಷಾರಾಮಿ ಕಾರುಗಳ ಸಂಗ್ರಾಹಕರಾಗಿದ್ದಾರೆ ಮತ್ತು ಅವರ ಗ್ಯಾರೇಜ್‌ನಲ್ಲಿ ಹಲವಾರು ದುಬಾರಿ ಕಾರುಗಳಿವೆ. ಅವರ ಸಂಗ್ರಹಣೆಯಲ್ಲಿ ಲಂಬೋರ್ಗಿನಿ ಗಲ್ಲಾರ್ಡೊ LP570 ಸೂಪರ್‌ಲೆಗ್ಗೆರಾ, ಲೋಟಸ್ ಎಲಿಸ್ ಕನ್ವರ್ಟಿಬಲ್, ನಿಸ್ಸಾನ್ ಸ್ಕೈಲೈನ್ GTR, ಹೋಂಡಾ S2000, ಫೆರಾರಿ 458 ಇಟಾಲಿಯಾ ಮತ್ತು ಆಡಿ ಕ್ಯೂ7 ಸೇರಿವೆ.

ಗೌತಮ್ ಸಿಂಘಾನಿಯಾ ಎರಡು ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ. ಇದಲ್ಲದೆ ಅವರು ಖಾಸಗಿ ಜೆಟ್ ‘ಬೊಂಬಾರ್ಡಿಯರ್ ಚಾಲೆಂಜರ್ 600’ ಅನ್ನು ಹೊಂದಿದ್ದಾರೆ. ಇದರ ಬೆಲೆ150 ಕೋಟಿ ರೂ.

ಗೌತಮ್ ಸಿಂಘಾನಿಯಾ ಅವರು ಸ್ಪೀಡ್‌ಬೋಟ್‌ಗಳನ್ನು ಇಷ್ಟಪಡುತ್ತಾರೆ . ಹೀಗಾಗಿ ಅವರು ತಮ್ಮ ಸ್ಪೀಡ್‌ಬೋಟ್‌ಗಳಿಗೆ ಜೇಮ್ಸ್ ಬಾಂಡ್ ಚಿತ್ರಗಳಾದ ‘ಗೋಲ್ಡೆನಿ’, ‘ಗೋಲ್ಡ್ ಫಿಂಗರ್’, ‘ಆಕ್ಟೋಪಸ್ಸಿ’ ಮತ್ತು ‘ಥಂಡರ್‌ಬಾಲ್’ ಎಂದು ಹೆಸರಿಸಿದ್ದಾರೆ. ವೇಗದ ದೋಣಿಯ ಹೊರತಾಗಿ ಬಿಲಿಯನೇರ್ ಗೌತಮ್ ಸಿಂಘಾನಿಯಾ ಎರಡು ಐಷಾರಾಮಿ ವಿಹಾರ ನೌಕೆಗಳನ್ನು ಸಹ ಹೊಂದಿದ್ದಾರೆ.

ದಿ ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಅವರ ವಿಹಾರ ನೌಕೆ ‘ಮೂನ್‌ರೇಕರ್’ ನಲ್ಲಿ 10 ಜನರಿರಲು ಸ್ಥಳಾವಕಾಶವಿದೆ. ಇದು ಜಿಮ್ ಮತ್ತು ಸಿನಿಮಾ ಹಾಲ್ ಸಹ ಹೊಂದಿದೆ. ಅವರ ಮತ್ತೊಂದು ವಿಹಾರ ನೌಕೆಯ ಹೆಸರು ‘ಅಶೇನಾ’, ಇದು ತೇಗದಿಂದ ಮಾಡಲ್ಪಟ್ಟಿದೆ. ಇದು 8 ಸಿಬ್ಬಂದಿ ಸದಸ್ಯರೊಂದಿಗೆ 10 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.

ಗೌತಮ್ ಸಿಂಘಾನಿಯಾ ಅವರು 6000 ಕೋಟಿ ಮೌಲ್ಯದ ‘ಜೆಕೆ ಹೌಸ್’ ಎಂಬ ಅದ್ದೂರಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಇದು ಉದ್ಯಮಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ನಂತರ ಭಾರತದ ಎರಡನೇ ಅತಿ ಎತ್ತರದ ಮನೆಯಾಗಿದೆ. ದಕ್ಷಿಣ ಮುಂಬೈನಲ್ಲಿರುವ ಅವರ ಅರಮನೆಯ ನಿವಾಸವು 37 ಮಹಡಿಗಳನ್ನು ಹೊಂದಿದೆ.

ಗೌತಮ್ ಸಿಂಘಾನಿಯಾ ಅವರು ಫಿಟ್ನೆಸ್ ತರಬೇತುದಾರ, ಯೋಗ ತಜ್ಞ ಮತ್ತು ಪ್ರೇರಕ ಭಾಷಣಕಾರರಾಗಿರುವ ನವಾಜ್ ಮೋದಿ ಸಿಂಘಾನಿಯಾ ಅವರನ್ನು ವಿವಾಹವಾಗಿದ್ದಾರೆ. ನವಾಜ್ ಮೋದಿ ಸಿಂಘಾನಿಯಾ ‘ಬಾಡಿ ಆರ್ಟ್ ಫಿಟ್‌ನೆಸ್ ಸೆಂಟರ್’ ಸಂಸ್ಥಾಪಕರೂ ಹೌದು. ಈ ದಂಪತಿಗೆ ನಿಹಾರಿಕಾ ಮತ್ತು ನೀಸಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...