![](https://kannadadunia.com/wp-content/uploads/2023/06/31c3e0a5-f747-45e2-bf5b-18e72fd16ca9.jpg)
ಬಾಲ್ಯವೆಂಬುದು ಪ್ರತಿಯೊಬ್ಬರಿಗೂ ವಿಶಿಷ್ಟವಾದ ಅನುಭವ. ಮುಗ್ಧತೆ ವಯಸ್ಸಿನ ಈ ಹಂತ ಮರಳಿ ಪಡೆಯಲಾಗದ ಅನುಭವ ನೀಡುತ್ತದೆ. ಕಡಿವಾಣವಿಲ್ಲದ ಆಟ ಮತ್ತು ವಿನೋದವನ್ನ ಅನುಭವಿಸುವ ಈ ವಯಸ್ಸಲ್ಲಿ ಯಾವುದೇ ಜವಾಬ್ದಾರಿಯ ತಲೆನೋವಿಲ್ಲದೇ ಆನಂದಿಸಬಹುದು.
ಆದರೆ ಇತ್ತೀಚೆಗೆ ಪುಟ್ಟ ವಯಸ್ಸಿನಲ್ಲೇ ಓದು ಮತ್ತು ಹೋಂವರ್ಕ್ ನ ಒತ್ತಡ ಮಕ್ಕಳ ಮೇಲೆ ಹಲವು ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು 6 ವರ್ಷ ವಯಸ್ಸಿನ ಮಗುವಿನ ಟೈಂ ಟೇಬಲ್ ಹಂಚಿಕೊಂಡಿದ್ದು ಅದು ನೆಟ್ಟಿಗರಲ್ಲಿ ನಗು ಮೂಡಿಸಿದೆ.
6 ವರ್ಷದ ಬಾಲಕನ ದಿನಚರಿಯನ್ನು ವೇಳಾಪಟ್ಟಿಯಲ್ಲಿ ಉತ್ತಮವಾಗಿ ವರ್ಗೀಕರಿಸಿದ್ದು ಸಮಯವನ್ನು ನಿರ್ವಹಿಸುವ ಪ್ರಯತ್ನವು ಶ್ಲಾಘನೀಯವಾಗಿದೆ. ಅಧ್ಯಯನದ ಸಮಯವನ್ನು ಕೇವಲ 15 ನಿಮಿಷಗಳು ಎಂದು ನಮೂದಿಸಿದರೆ, ಗಂಟೆಗಳಷ್ಟು ಕಾಲ ಆಟವಾಡಲು ಸಮಯ ಮೀಸಲಿಡಲಾಗಿದೆ.
ಅಜ್ಜಿಯರೊಂದಿಗೆ ಮಾವಿನ ಹಣ್ಣುಗಳನ್ನು ತಿನ್ನುವುದು , ಕೆಂಪು ಕಾರ್ ನೊಂದಿಗೆ ಆಡುವುದು ಸೇರಿದಂತೆ ಟಿವಿ ನೋಡುವ ಸಮಯವೂ ಟೈಂ ಟೇಬಲ್ ನಲ್ಲಿದೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.