alex Certify 6 ವರ್ಷ ಜಾಲತಾಣದಿಂದ ದೂರ ಉಳಿದಿದ್ದ ಯುವಕನಿಗೆ ‘ಬಂಪರ್’‌ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ವರ್ಷ ಜಾಲತಾಣದಿಂದ ದೂರ ಉಳಿದಿದ್ದ ಯುವಕನಿಗೆ ‘ಬಂಪರ್’‌ ಗಿಫ್ಟ್

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಜನರಿಗೆ ಹುಚ್ಚು ಹಿಡಿಸಿವೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫೇಸ್ಬುಕ್‌, ಇನ್‌ ಸ್ಟಾಗ್ರಾಮ್‌, ಟ್ವಿಟ್ಟರ್‌ ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಆದ್ರೆ 18 ವರ್ಷದ ಯುವಕನೊಬ್ಬ ಕಳೆದ 6 ವರ್ಷಗಳಿಂದ ಸೋಶಿಯಲ್‌ ಮೀಡಿಯಾ ಕಡೆ ತಲೆಹಾಕಿಯೇ ಇರಲಿಲ್ಲ.

ಇದಕ್ಕಾಗಿ ಅವನಿಗೆ ಭಾರೀ ಬಹುಮಾನವೇ ಸಿಕ್ಕಿದೆ. ವಿದ್ಯಾರ್ಥಿಯ ತಾಯಿ, ಮಗನಿಗೆ 1.35 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಕೊಟ್ಟಿದ್ದಾಳೆ. 6 ವರ್ಷಗಳ ಹಿಂದೆ ಲೋರ್ನಾ ತನ್ನ 12 ವರ್ಷದ ಮಗ ಸಿವರ್ಟ್‌ ಗೆ ಈ ಆಫರ್‌ ಕೊಟ್ಟಿದ್ದಳು.

ಆಗ ಚಿಕ್ಕ ಬಾಲಕನಾಗಿದ್ದರಿಂದ ಸಿವರ್ಟ್‌ ಗೆ 1800 ಡಾಲರ್‌ ದೊಡ್ಡ ಮೊತ್ತವೆನಿಸಿತ್ತು. ಹಾಗಾಗಿ ತಾಯಿಯ ಷರತ್ತಿಗೆ ಒಪ್ಪಿದ್ದ. ಅದರಂತೆ 6 ವರ್ಷ ಜಾಲತಾಣಗಳಿಂದ ದೂರ ಉಳಿದಿದ್ದಾನೆ.

ಮಗನ 18ನೇ ಹುಟ್ಟುಹಬ್ಬಕ್ಕೆ 1800 ಡಾಲರ್‌ ಹಣವನ್ನು ಉಡುಗೊರೆಯಾಗಿ ಕೊಟ್ಟಿರೋ ಲೋರ್ನಾ, ಷರತ್ತಿನಂತೆ 6 ವರ್ಷ ಸೋಶಿಯಲ್‌ ಮೀಡಿಯಾದಿಂದ ದೂರವಿದ್ದ ಮಗನಿಗೆ ಈಗ ಇನ್‌ ಸ್ಟಾಗ್ರಾಮ್‌, ಸ್ನಾಪ್‌ ಚಾಟ್‌ ಮತ್ತು ಟ್ವಿಟ್ಟರ್‌ ನಲ್ಲಿ ಖಾತೆ ತೆರೆಯಲು ಅನುಮತಿ ಕೊಟ್ಟಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...