alex Certify 6 ಖಂಡ, 38 ದೇಶ……! ಶ್ವಾನದ ಜೊತೆಯಲ್ಲಿ ಬರೋಬ್ಬರಿ 48 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ಖಂಡ, 38 ದೇಶ……! ಶ್ವಾನದ ಜೊತೆಯಲ್ಲಿ ಬರೋಬ್ಬರಿ 48 ಸಾವಿರ ಕಿ.ಮೀ. ಪಾದಯಾತ್ರೆ ಕೈಗೊಂಡ ವ್ಯಕ್ತಿ

ಶ್ವಾನ ಹಾಗೂ ಮನುಷ್ಯನ ನಡುವಿನ ಬಂಧ ಎಷ್ಟು ಸ್ಟ್ರಾಂಗ್​ ಆಗಿದೆ ಎಂಬುದನ್ನು ಹೆಚ್ಚು ವಿವರಿಸಬೇಕಾಗಿಲ್ಲ. ಇತ್ತೀಚಿಗೆ ತೆರೆ ಕಂಡಿರುವ ಚಾರ್ಲಿ 777 ಸಿನಿಮಾ ಕೂಡ ಇದೇ ಕತೆಯನ್ನು ಹೇಳಿದೆ. ಈ ನಡುವೆ ನ್ಯೂಜೆರ್ಸಿಯಲ್ಲಿ ನಿಜವಾದ ಧರ್ಮ ಹಾಗೂ ಚಾರ್ಲಿಯಂತಹ ಕತೆಯೊಂದು ನಡೆದಿದೆ.

ಓರ್ವ ವ್ಯಕ್ತಿ ಹಾಗೂ ನಾಯಿ ಬರೋಬ್ಬರಿ 48 ಸಾವಿರ ಕಿಲೋಮೀಟರ್ ಒಟ್ಟಾಗಿ ಪ್ರಯಾಣಿಸಿದ್ದಾರೆ. ಕಾಲ್ನಡಿಗೆಯಲ್ಲಿಯೇ ಇಷ್ಟು ದೂರವನ್ನು ಇವರಿಬ್ಬರು ಕ್ರಮಿಸಿರೋದು ವಿಶೇಷ. ನ್ಯೂಜೆರ್ಸಿಯ ನಿವಾಸಿಯಾಗಿರುವ ಟಾಮ್​ ಟರ್ಸಿಷ್​​ 2015ರಲ್ಲಿ ಪ್ರಪಂಚದಾದ್ಯಂತ ತಮ್ಮ ಪರ್ಯಟನೆಯನ್ನು ಆರಂಭಿಸಿದರು. ಏಳು ವರ್ಷಗಳ ಓಡಾಟದ ಬಳಿಕ ಇದೀಗ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ.

ತಮ್ಮ 26ನೇ ಜನ್ಮದಿನದ ಮುನ್ನ ಟಾಮ್​ ಇಂತಹದ್ದೊಂದು ಅದ್ಭುತ ಸಾಧನೆಯನ್ನು ಮಾಡಲು ನಿರ್ಧಾರ ಕೈಗೊಂಡರು. ಡಿಎಸ್​ಎಲ್​ಆರ್​ ಕ್ಯಾಮರಾ, ಲ್ಯಾಪ್​ಟಾಪ್​. ಹೈಕಿಂಗ್​ ಗೇರ್​​. ಹೀಗೆ ಅವಶ್ಯಕ ವಸ್ತುಗಳನ್ನು ಹಿಡಿದು ಮನೆಯಿಂದ ಹೊರ ಬಂದರು. ಪನಾಮದಿಂದ ಆರಂಭವಾದ ಈ ಜರ್ನಿಯಲ್ಲಿ ಇವರಿಗೆ ಜೊತೆಯಾಗಿದ್ದು ಸವನ್ನಾ ಎಂಬ ಹೆಣ್ಣು ನಾಯಿ.‌

ಪ್ರಾಣಿಗಳ ಆಶ್ರಯ ಧಾಮದಲ್ಲಿ ಸವನ್ನಾ ನಾಯಿಯ ಜೊತೆಯಲ್ಲಿ ಒಡನಾಟ ಆರಂಭಿಸಿದ ಟಾಮ್​ ಆಕೆಯ ಜೊತೆಯಲ್ಲಿ ಪ್ರಪಂಚ ಪರ್ಯಟನೆ ಮಾಡಿ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.‌

ಅಲ್ಬೇನಿಯಾ, ಮಾಂಟೆನೆಗ್ರೊ, ಕ್ರೊಯೇಷಿಯಾ, ಗ್ರೀಸ್, ಟರ್ಕಿ, ಅಜೆರ್ಬೈಜಾನ್, ಇಟಲಿ ಮುಂತಾದ ಸ್ಥಳಗಳಿಗೆ ಟಾಮ್​ ಪ್ರಯಾಣಿಸಿದರು. ಟಾಮ್​ ಹಾಗೂ ಸವನ್ನಾ ಒಟ್ಟಾಗಿ ಆರು ಖಂಡಗಳು ಹಾಗೂ 38 ದೇಶಗಳನ್ನು ಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...