alex Certify 51ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ ಈ ರಾಜಕಾರಣಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

51ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ ಈ ರಾಜಕಾರಣಿ…!

ಮನೋಜ್ ತಿವಾರಿ ಭೋಜ್‌ಪುರಿ ನಟ, ಜನಪ್ರಿಯ ರಾಜಕಾರಣಿಯೂ ಹೌದು. ಹಲವು ವರ್ಷಗಳ ಕಾಲ ನಟನೆಯಲ್ಲಿದ್ದ ಮನೋಜ್‌ ತಿವಾರಿ, ಸದ್ಯ ದೆಹಲಿಯ ಪ್ರಬಲ ರಾಜಕಾರಣಿ. ದೆಹಲಿ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯಿಂದ ಹಿಡಿದು ಸಂಸದರವರೆಗೆ ನಿಜ ಜೀವನದಲ್ಲೂ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಆದ್ರೀಗ ಮನೋಜ್‌ ತಿವಾರಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಚರ್ಚೆಯಾಗ್ತಿದೆ. ಕಾರಣ ಮನೋಜ್‌ ತಿವಾರಿ 51ರ ಹರೆಯದಲ್ಲಿ ಮೂರನೇ ಬಾರಿಗೆ ತಂದೆಯಾಗ್ತಿದ್ದಾರೆ.

ಮನೋಜ್ ತಿವಾರಿ ಎರಡು ಮದುವೆಯಾಗಿದ್ದಾರೆ. ಅವರು 1999 ರಲ್ಲಿ ರಾಣಿ ತಿವಾರಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗಳೂ ಇದ್ದಾಳೆ. ಆದರೆ ಕೆಲವು ವರ್ಷಗಳ ನಂತರ ಈ ಸಂಬಂಧವು ಮುರಿದು ಬೀಳುವ ಹಂತಕ್ಕೆ ತಲುಪಿತು. ಇಬ್ಬರ ನಡುವಿನ ವೈಮನಸ್ಸು ವಿಚ್ಛೇದನದ ಹಂತ ತಲುಪಿತ್ತು. 2012ರಲ್ಲಿ ಇಬ್ಬರೂ ಶಾಶ್ವತವಾಗಿ ಬೇರ್ಪಟ್ಟರು.

ಮನೋಜ್ ತಿವಾರಿ, ರಾಣಿಯಿಂದ ವಿಚ್ಛೇದನ ಪಡೆದ ನಂತರ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 49 ನೇ ವಯಸ್ಸಿನಲ್ಲಿ ಅವರು ಎರಡನೇ ಬಾರಿಗೆ ವಿವಾಹವಾದರು. ಈ ಮದುವೆಯನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು. ಆದರೆ 2020ರಲ್ಲಿ ದಂಪತಿಗೆ ಮಗಳು ಜನಿಸಿದ್ದಾಳೆ. ಆಗ ಮನೋಜ್‌ ತಿವಾರಿ ಎರಡನೇ ಮದುವೆ ವಿಚಾರವೂ ಬೆಳಕಿಗೆ ಬಂದಿತ್ತು.

ಈಗ ತಿವಾರಿ ಪತ್ನಿ ಮತ್ತೆ ಗರ್ಭಿಣಿ, ಸದ್ಯದಲ್ಲೇ ಮನೋಜ್‌ ತಿವಾರಿ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ತಿವಾರಿ, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಮನೋಜ್‌ ತಿವಾರಿ 51ನೇ ವಯಸ್ಸಿಗೆ ಮತ್ತೆ ತಂದೆಯಾಗ್ತಿರೋ ವಿಚಾರ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿಯಾಗ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...