alex Certify 500 ಕೋಟಿ ರೂ. ಕ್ಲಬ್ ಸೇರಿದ ಕೆಜಿಎಫ್ 2: ನಾಲ್ಕೇ ದಿನದಲ್ಲಿ 29 ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

500 ಕೋಟಿ ರೂ. ಕ್ಲಬ್ ಸೇರಿದ ಕೆಜಿಎಫ್ 2: ನಾಲ್ಕೇ ದಿನದಲ್ಲಿ 29 ದಾಖಲೆ

KGF Chapter 2' BO collection Day 4: Yash's film crosses Rs 550 crore,  becomes 2nd highest grosser worldwide | Regional News | Zee Newsಹೊಂಬಾಳೆ ಫಿಲಂಸ್ ವಿಜಯ್ ಕಿರಂಗದೂರು ನಿರ್ಮಾಣದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನ ಟಂಡನ್, ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ನಾಗಾಲೋಟ ಸೃಷ್ಟಿಸಿದೆ.

ಬಿಡುಗಡೆಯಾಗಿ ಕೇವಲ ನಾಲ್ಕೇ ದಿನಕ್ಕೆ 551.86 ಕೋಟಿ ಗಳಿಸಿ 500 ಕೋಟಿ ಕ್ಲಬ್ ಸೇರಿದೆ. ಇದಲ್ಲದೆ 29 ದಾಖಲೆಗಳನ್ನು ಸೃಷ್ಟಿಸಿದೆ. ಬಾಲಿವುಡ್ ಒಂದರಲ್ಲೇ 200 ಕೋಟಿ ರೂಪಾಯಿ ಗಳಿಸಿದೆ. ಕೆಜಿಎಫ್ 2 ಬಾಲಿವುಡ್ ಕಾಲಿವುಡ್ ಮಾಲಿವುಡ್ ಎಲ್ಲಾ ಸಿನಿಮಾಗಳ ದಾಖಲೆ ಮುರಿದು ಹಾಕಿದೆ.

ನಾಲ್ಕೇ ದಿನಗಳಲ್ಲಿ 551.86 ಕೋಟಿ ರೂಪಾಯಿ ಗಳಿಸಿದೆ. ಕಡಿಮೆ ಸಮಯದಲ್ಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿ. ಕರ್ನಾಟಕದಲ್ಲೂ ಬಾಕ್ಸಾಫೀಸ್ ಧೂಳಿಪಟ. ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಎರಡನೇ ದಿನ ರೆಕಾರ್ಡ್ ಬ್ರೇಕ್ ಕಲೆಕ್ಷನ್. ಮೂರನೇ ದಿನವೂ ಬಾಕ್ಸಾಫೀಸ್ ನಲ್ಲಿ ರೆಕಾರ್ಡ್. ನಾಲ್ಕನೇ ದಿನ 132.13 ಕೋಟಿ ಗಳಿಕೆ. ಬಾಲಿವುಡ್ ನಲ್ಲಿ ಮೊದಲ ದಿನ 52 ಕೋಟಿ ಗಳಿಕೆ. ಬಾಲಿವುಡ್ನಲ್ಲಿ ಎರಡನೇ ದಿನ45.50 ಕೋಟಿ ಗಳಿಕೆ. ಬಾಲಿವುಡ್ ನಲ್ಲಿ ನಾಲ್ಕೇ ದಿನಕ್ಕೆ 200 ಕೋಟಿ ಗಳಿಸಿದೆ.

ಬಾಲಿವುಡ್ನಲ್ಲಿ ಭಾನುವಾರವೂ ಕೆಜಿಎಫ್ 2 ಹವಾ. ಬಾಲಿವುಡ್ ಇತಿಹಾಸದಲ್ಲೆ ಭಾನುವಾರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ. ಕೇರಳದಲ್ಲಿ ಮೊದಲ ದಿನವೇ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ. ಮಲಯಾಳಂ ಅವತರಣಿಕೆಯಲ್ಲಿ ಎರಡನೇ ದಿನವೂ ದಾಖಲೆ ಗಳಿಕೆ. ಕೇರಳದಲ್ಲಿ ವೀಕೆಂಡ್ ರೆಕಾರ್ಡ್ ಬ್ರೇಕ್. ಆಂಧ್ರ ತೆಲಂಗಾಣದಲ್ಲೂ ಟಾಲಿವುಡ್ ರೆಕಾರ್ಡ್ ಬ್ರೇಕ್ ಗಳಿಕೆ ಭಾನುವಾರ ತೆಲುಗಿನಲ್ಲಿ ಅತಿ ಹೆಚ್ಚು ಗಳಿಕೆ. ಕಾಲಿವುಡ್ ನಲ್ಲೂ ದಾಖಲೆ ಬರೆದಿರುವ ಪರಭಾಷಾ ಚಿತ್ರ.

ಆರ್ ಆರ್ ಆರ್ ಅಬ್ಬರದ ನಡುವೆಯೂ ಕೆಜಿಎಫ್ ಮುನ್ನುಗ್ಗಿದೆ. ರಾಜಮೌಳಿ ಮೋಡಿ ನಡುವೆಯೂ ಕೆಜಿಎಫ್ ವೀಕ್ಷಕರನ್ನು ಸೆಳೆದಿದೆ. ಟಾಲಿವುಡ್ ನಲ್ಲಿ ವೀಕೆಂಡ್ ಭಾರಿ ಗಳಿಕೆ. ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದರ ಗುಣಗಾನ. ತಮಿಳುನಾಡಿನಲ್ಲಿ ಇತಿಹಾಸ ಸೃಷ್ಟಿಸಿದ ಕನ್ನಡ ಸಿನಿಮಾ. ಕಾಲಿವುಡ್ ನಲ್ಲೂ ಅತಿ ಹೆಚ್ಚು ವೀಕೆಂಡ್ ಗಳಿಕೆ. ತಮಿಳುನಾಡಿನಲ್ಲಿ ನಾಲ್ಕು ದಿನದಿಂದ ಭರ್ಜರಿ ಗಳಿಕೆ. ವಿದೇಶದಲ್ಲೂ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದೆ. 70ಕ್ಕೂ ಹೆಚ್ಚು ದೇಶಗಳಲ್ಲಿ ಕೆಜಿಎಫ್ ಮೋಡಿ ಮಾಡಿದೆ. ವಾರಾಂತ್ಯಕ್ಕೆ ಸಾವಿರ ಕೋಟಿ ಕ್ಲಬ್ ಸೇರುವುದು ಖಚಿತವಾಗಿದೆ.

ಕನ್ನಡದ ಚಿತ್ರವೊಂದು ಪ್ರಪಂಚದಾದ್ಯಂತ ಇತಿಹಾಸ ಸೃಷ್ಟಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇದುವರೆಗೂ ಯಾವ ಚಿತ್ರವೂ ನಿರ್ಮಿಸದ ದಾಖಲೆಯನ್ನು ಕನ್ನಡ ಚಿತ್ರ ನಿರ್ಮಿಸಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...