ಆನ್ಲೈನ್ನಲ್ಲಿ ಡೇಟಿಂಗ್ ಮಾಡುವವರು ಅಥವಾ ಪಾರ್ಟ್ನರ್ ಹುಡುಕುವವರು ಕೆಲವು ನಿದಿರ್ಷ್ಟ ಮಾನದಂಡದ ಮೇಲೆ ಹುಡುಕಾಟ ನಡೆಸುತ್ತಿರುತ್ತಾರೆ. ಅಪರೂಪಕ್ಕೆ ಕೆಲವು ವೈಚಿತ್ರವೂ ನಡೆದು ಹೋಗುತ್ತದೆ. ಇದಕ್ಕೊಂದು ಉದಾಹರಣೆ ಎಂದರೆ, ಇಬ್ಬರು ಮಕ್ಕಳನ್ನು ಹೊಂದಿರುವ 50 ವರ್ಷದ ವಿಚ್ಛೇದಿತ ಮಹಿಳೆ 25 ವರ್ಷದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
48 ವರ್ಷದ ರಾಚೆಲ್ ಕೌಡೆಲ್ ವಿಚ್ಛೇದನ ಪಡೆದ ಬಳಿಕ ಆನ್ಲೈನ್ನಲ್ಲಿ ಸಂಗಾತಿಯನ್ನು ಹುಡುಕುತ್ತಿರುವಾಗ, ತನ್ನ ವಯಸ್ಸಿನ ಆದ್ಯತೆಯ ಸೆಟ್ಟಿಂಗ್ಗಳನ್ನು ಬದಲಾಯಿಸಲು ಮರೆತಿದ್ದರು. ಇದರ ಪರಿಣಾಮ ನಂತರ ತನಗಿಂತ 23 ವರ್ಷ ಚಿಕ್ಕ ಹುಡುಗನ ಪ್ರೀತಿಯ ಬಲೆಗೆ ಸಿಲುಕಿದ್ದರು.
2020ರ ಸೆಪ್ಟೆಂಬರ್ನಲ್ಲಿ ಇಬ್ಬರ ಮಕ್ಕಳ ತಾಯಿ ವಿಚ್ಛೇದನ ಪಡೆದಿದ್ದರು. ನಂತರ ಅವರು ಡೇಟಿಂಗ್ ಅಪ್ಲಿಕೇಶನ್ಗಳಲ್ಲಿ ಸಂಗಾತಿ ಹುಡುಕಲು ಪ್ರಯತ್ನಿಸಲು ನಿರ್ಧರಿಸಿದರು. ಕೆಲವು ಕೆಟ್ಟ ಪ್ರಯತ್ನಗಳ ನಂತರ ಅಲೆಕ್ಸ್ ಮೈಕೆಲ್ ಎಂಬಾತನನ್ನು ಕಂಡಿದ್ದು, ಈ ವೇಳೆ ಆತನಿಗೆ 23 ವರ್ಷ.
ಇಬ್ಬರೂ ಚಾಟ್ ಮಾಡಲು ಪ್ರಾರಂಭಿಸಿದರು. ಆತನ ಕಣ್ಣಿನ ಸೌಂದರ್ಯಕ್ಕೆ ಆಕೆ ಮಾರುಹೋದಳು. ಬಳಿಕ ವಯಸ್ಸಿನ ಪ್ರಶ್ನೆ ಉದ್ಭವಿಸಿದೆ. ಮೂಲತಃ ಟೆಕ್ಸಾಸ್ನ ಅಲೆಕ್ಸ್ ತನ್ನ ವಯಸ್ಸನ್ನು 23 ಎಂದು ಮೊದಲು ಬಹಿರಂಗಪಡಿಸಿದಾಗ, ಆಕೆ ಆಶ್ಚರ್ಯಚಕಿತರಾಗಿ, ತುಂಬ ಚಿಕ್ಕದಾಯಿತೆಂದರೂ, ಬಳಿಕ ಅದು ಪರಿಗಣಿಸಲಿಲ್ಲ.
ಅವರ ಮಾತುಕತೆ ಮುಂದುವರಿದಂತೆ ಇಬ್ಬರಲ್ಲಿ ಬಹಳಷ್ಟು ಸಾಮ್ಯತೆ ಇದೆ ಎಂದು ಆಕೆ ಕಂಡುಕೊಂಡಳು. ಫಾರ್ಮಾಸ್ಯುಟಿಕಲ್ ಕಂಪನಿಗಳಿಗೆ ವೆಬ್ಸೆೈಟ್ ರಚನೆಕಾರರಾಗಿರುವ ಅಲೆಕ್ಸ್, ಡೇಟಿಂಗ್ ಅಪ್ಲಿಕೇಶನ್ ಟಿಂಡರ್ನಲ್ಲಿ ತನ್ನ ಆದ್ಯತೆಯನ್ನು ಬದಲಾಯಿಸಿದಾಗ ಮತ್ತು ಅವಳೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ವಯಸ್ಸಿನ ಅಂತರದ ವಿಚಾರ ಅನಿರೀಕ್ಷಿತವಾಗಿ ಎದುರಾಯಿತು ಎಂದು ಬಹಿರಂಗಪಡಿಸಿದ್ದಾರೆ.
ಓ ಗಾಡ್, ಆಕೆ ತನ್ನ ವಯಸ್ಸಿಗೆ ತಕ್ಕಂತೆ ಕಾಣುತ್ತಾಳೆ, ಅವಳು ನಲವತ್ತರ ಹರೆಯದವರಂತೆ ಕಾಣುತ್ತಿಲ್ಲ. ಅವಳು ತುಂಬಾ ಕೂಲ್, ಕೇವಲ ಸುಂದರವಾದ ಮುಖಕ್ಕಿಂತ ಹೆಚ್ಚು ಎಂದು ಆತ ಕಾಮೆಂಟ್ ಮಾಡಿದ್ದಾನೆ.
ರಾಚೆಲ್ ಈ ವಿಷಯದಲ್ಲಿ ಇನ್ನಷ್ಟು ನಂಬಿಕೆ ತಂದುಕೊಳ್ಳಲು ನಿರ್ಧರಿಸಿ ಅಲೆಕ್ಸ್ ಅನ್ನು ಭೇಟಿ ಮಾಡಲು ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದರು. ಅವರಿಬ್ಬರೂ 2020ರ ಕೊನೆಯಲ್ಲಿ ಮಿಯಾಮಿ ಮತ್ತು ಆಸ್ಟಿನ್ಗೆ ಪ್ರಯಾಣಿಸಿದರು. ಒಟ್ಟಿಗೆ ಸಮಯ ಕಳೆದ ನಂತರ ಡಿಸೆಂಬರ್ 2020 ರಲ್ಲಿ ಅಧಿಕೃತವಾಗಿ ಡೇಟಿಂಗ್ ಪ್ರಾರಂಭಿಸಿದರು. ರಾಚೆಲ್ ಅವರ ಕುಟುಂಬವು ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದೆ, ಅಲೆಕ್ಸ್ ಅವರ ಕುಟುಂಬವು ವಯಸ್ಸಿನ ಅಂತರವನ್ನು ಒಪ್ಪುವುದಿಲ್ಲ ಮತ್ತು ಅವರನ್ನು ಬೆಂಬಲಿಸುವುದಿಲ್ಲ.