ಕೊರೋನಾ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದಕ್ಕಾಗಿ ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗ್ಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದರೆ. ಈ ವೇಳೆ ಐದು ವರ್ಷದ ಬಾಲಕಿಯೊಬ್ಬಳು ಬೋರಿಸ್ ಅವ್ರ ಪಾರ್ಟಿ ಘಟನೆಯನ್ನ ದೂಷಿಸಿ ಸಿಕ್ಕಾಪಟ್ಟೆ ಫೇಮಸ್ ಆಗ್ತಿದ್ದಾಳೆ.
ಕಳೆದ ವಾರದಿಂದ ಈ ಘಟನೆಯನ್ನು ಟಿವಿ ಮಾಧ್ಯಮಗಳಲ್ಲಿ ಅನುಸರಿಸುತ್ತಿರುವ ಐದು ವರ್ಷದ ಲಾಯ್ಲಾ, ದೇಶದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡಿರುವ ಬಗೆ, “ಬ್ರಿಂಗ್ ಯುವರ್ ಓನ್ ಬೂಜ಼್ ಪಾರ್ಟಿ” ಗೆ ಪ್ರಧಾನಿ ಬೋರಿಸ್ ಹಾಜರಾಗಿರುವುದು ಎಷ್ಟು ತಪ್ಪು ಎಂದು ವಿವರಿಸಿರುವ ಆಕೆಯ ಜಾಣತನ, ಯು.ಕೆ ಮಂದಿಯನ್ನ ಈಕೆಯೇ ನಮ್ಮ ಮುಂದಿನ ಪ್ರಧಾನಿ ಎನ್ನುವಂತೆ ಮಾಡಿದೆ.
ಮಗುವಾಗಿ ವರ್ಷವಾದ್ಮೇಲೆ ಮದುವೆಯಾಗ್ತಿದ್ದಾರೆ ಪಿಎಂ
ಯು.ಕೆ.ಯ ಲೀಸೆಸ್ಟರ್‌ಶೈರ್ ಪ್ರದೇಶದಲ್ಲಿ ವಾಸವಾಗಿರುವ ಲಾಯ್ಲಾ ಐದು ವರ್ಷದ ಪುಟ್ಟ ಬಾಲಕಿ. ತನ್ನ ಅಜ್ಜಿ-ಅಜ್ಜ ಕಾಂತಿ ಸೋಮಾನಿ, ಕುಸುನ್ ಸೋಮಾನಿ, ಅವಳ ತಾಯಿ ದೇವೀನಾ ಸೋಮಾನಿಗೆ ಲಾಯ್ಲಾ ದೇಶದ ಕೊರೋನಾ ಸ್ಥಿತಿಯಲ್ಲಿ ಪ್ರಧಾನಿ ಬೋರಿಸ್ ಹೀಗೆ ಮಾಡಿರುವುದು ತಪ್ಪು ಎಂದು ಅವರಿಗೆ ರಾಜಕೀಯ ಪರಿಸ್ಥಿತಿಯನ್ನು ನಿರರ್ಗಳವಾಗಿ ವಿವರಿಸುವಾಗ ಈ ವಿಡಿಯೋವನ್ನ ಚಿತ್ರಿಸಿ, ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಬೋರಿಸ್ ಜಾನ್ಸನ್ ಎಲ್ಲರಿಗೂ ಮನೆಯಲ್ಲಿಯೇ ಇರಲು ಹೇಳಿದರು, ಆದರೆ ಲಾಕ್‌ಡೌನ್ ನಲ್ಲಿ, ಅವರೇ ಪಾರ್ಟಿ ಮಾಡಿದ್ದಾರೆ. ಬೋರಿಸ್ ಹಠಮಾರಿ, ಅವರು ನಾಟಿ(Naughty)ಸೆಂಟರ್ ಗೆ ಹೋಗಿ, ಲಾಕ್‌ಡೌನ್‌ನಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ಎಲ್ಲರಲ್ಲೂ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಮತ್ತು ಅವರು ತಮ್ಮ ಪ್ರಧಾನಿ ಮನೆಗೆ ಹಿಂತಿರುಗಲು ಸಾಧ್ಯವಿಲ್ಲ ಆದ್ದರಿಂದ ಅವರು ಇನ್ನು ಮುಂದೆ ಅವರು ಯು.ಕೆ.ಯ ಪ್ರಧಾನಿ ಅಲ್ಲ. ಅವರು ಕೆಟ್ಟ ಪಿಎಂ, ಆದರೆ ಅವರಿಗೆ ಅದೃಷ್ಟವಿದ್ದರೆ, ಅವರು ತಮ್ಮ ಪ್ರಧಾನಿ ಮನೆಗೆ ಹಿಂತಿರುಗಬಹುದು ಮತ್ತು ಅವರು ಮತ್ತೊಮ್ಮೆ ಪ್ರಧಾನಿಯಾಗಬಹುದು ಎಂದಿರುವ ಲಾಯ್ಲಾ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸ್ಥಳೀಯ ಮಾಧ್ಯಮದೊಂದಿಗೆ ಮಾತನಾಡಿರುವ ಲಾಯ್ಲಾ ತಾಯಿ, ದೇವಿನಾ ಆಕೆ ಎಷ್ಟು ತಿಳಿದುಕೊಂಡಿದ್ದಾಳೆ ಎಂಬ ಬಗ್ಗೆ ಆಶ್ಚರ್ಯವಾಯಿತು. ಆಕೆ ಈ ವಿಚಾರ ವಿವರಿಸುತ್ತಿರುವಾಗ ನಗು ತಡೆಯಲಾಗಲಿಲ್ಲ ಎಂದಿದ್ದಾರೆ.