alex Certify ನಾವು ಬೆಸ್ಟ್ ಫ್ರೆಂಡ್ಸ್ ಎಂದು ಪದೇ ಪದೇ ಸಾಬೀತುಪಡಿಸುತ್ತಿರುವ ರಶ್ಮಿಕ – ದೇವರಕೊಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾವು ಬೆಸ್ಟ್ ಫ್ರೆಂಡ್ಸ್ ಎಂದು ಪದೇ ಪದೇ ಸಾಬೀತುಪಡಿಸುತ್ತಿರುವ ರಶ್ಮಿಕ – ದೇವರಕೊಂಡ

ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿರುವ ಕನ್ನಡತಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ಸೂಪರ್ ಹಿಟ್‌ ಚಿತ್ರಗಳನ್ನು ನೀಡಿದ ನಟ ವಿಜಯ್ ದೇವರಕೊಂಡ ಮದುವೆಯಾಗುತ್ತಾರೆಂಬ ಗುಸುಗುಸು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ.

ಅವರಿಬ್ಬರು ಈ ವಿಚಾರದಲ್ಲಿ ಅಭಿಮಾನಿಗಳಿಗೆ ಸ್ಪಷ್ಟವಾಗಿ ಸಣ್ಣ ಸುಳಿವು ಬಿಟ್ಟುಕೊಡುತ್ತಿಲ್ಲ. ಆದರೆ ಅವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂಬುದನ್ನು ಸಾಬೀತುಮಾಡಿಕೊಂಡು ಬಂದಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ವದಂತಿ ಹಬ್ಬಿ ಇತ್ತೀಚೆಗಷ್ಟೆ ಮತ್ತೆ ಸುದ್ದಿಗೆ ಬಂದಿದ್ದರು. ಆದರೆ, ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಬಲವಂತವಾಗಿ ಬೆತ್ತಲೆ ಫೋಟೋ ತೆಗೆದು ಪತ್ನಿಗೆ ಉದ್ಯಮಿ ಬ್ಲಾಕ್ಮೇಲ್

ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳ ನಂತರ ವಿಜಯ್ ಮತ್ತು ರಶ್ಮಿಕಾ ನಿಕಟ ಬಾಂಧವ್ಯ ಬೆಳೆಸಿಕೊಂಡರು ಮತ್ತು ಉತ್ತಮ ಸ್ನೇಹಿತರಾದರು. ಅವರ ಬಿಡುವಿಲ್ಲದ ಶೆಡ್ಯುಲ್ ಮತ್ತು ಲೆಕ್ಕವಿಲ್ಲದಷ್ಟು ರೂಮರ್‌ಗಳ ಹೊರತಾಗಿಯೂ ಇಬ್ಬರೂ ಪರಸ್ಪರ ಭೇಟಿಯಾಗಿ ಸಮಯ ಕಳೆಯುತ್ತಿದ್ದಾರೆ.

ವಿಜಯ್ ಮತ್ತು ರಶ್ಮಿಕಾ ಗೀತ ಗೋವಿಂದಂ ಚಿತ್ರದ ಬಳಿಕ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಬ್ಬರೂ ಉತ್ತಮ ಸ್ನೇಹಿತರು ಎಂದು ಸಾಬೀತುಪಡಿಸಿದ ಕೆಲವು ಕ್ಷಣಗಳು ಇಲ್ಲಿವೆ.

ರಶ್ಮಿಕಾ ಪರ ನಿಂತ ವಿಜಯ್:

ಹಲವು ವರ್ಷಗಳ ಹಿಂದೆ ರಶ್ಮಿಕಾ ಮಂದಣ್ಣ ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಜೊತೆಗಿನ ವೈವಾಹಿಕ ನಿಶ್ಚಿತಾರ್ಥ ರದ್ದುಗೊಳಿಸಿದ್ದರು. 2019ರಲ್ಲಿ ಡಿಯರ್ ಕಾಮ್ರೇಡ್ ಪ್ರಚಾರದ ಸಮಯದಲ್ಲಿ, ವರದಿಗಾರ ರಶ್ಮಿಕಾಗೆ ರಕ್ಷಿತ್ ಅವರೊಂದಿಗಿನ ಹಿಂದಿನ ಸಂಬಂಧದ ಬಗ್ಗೆ ಕೇಳಿದರು. ಈ ವೇಳೆ ವಿಜಯ್ ದೇವರಕೊಂಡ ರಶ್ಮಿಕ ಪರವಾಗಿ ನಿಂತು ವರದಿಗಾರನ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯ್ ಸಾಂತ್ವನ:

ರಕ್ಷಿತ್ ಶೆಟ್ಟಿ ಜೊತೆಗಿನ ವಿರಾಮದ ಬಳಿಕ ರಶ್ಮಿಕಾ ಮಂದಣ್ಣ ತನ್ನ ಭಾವನೆಗಳನ್ನು ನಿಭಾಯಿಸಲು ಹೆಣಗಾಡಿದರು. ಈ ವೇಳೆ ಜೊತೆಗಿದ್ದವರು ವಿಜಯ್ ದೇವರಕೊಂಡ. ಆಕೆಯ ಆತ್ಮೀಯ ಗೆಳೆಯನಾಗಿ ಹೆಜ್ಜೆ ಹಾಕಿದರು. ನಾನು ರಕ್ಷಿತ್ ಶೆಟ್ಟಿಯೊಂದಿಗಿನ ಬ್ರೇಕಪ್ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ. ನನಗೆ ಕಾಳಜಿ, ಕಂಫರ್ಟ್ ಬೇಕಿತ್ತು, ಈ ವೇಳೆ ಹೊರಗೆ ಬೇರೆಯದೇ ಪ್ರಪಂಚವಿದೆ ಎಂದು ನನಗೆ ಅರ್ಥ ಮಾಡಿಕೊಟ್ಟವನು ದೇವರಕೊಂಡ ಎಂದು ಹೇಳಿದ್ದರು ರಶ್ಮಿಕಾ.

ಮನೆ ಗೃಹಪ್ರವೇಶದಲ್ಲಿ:

ವಿಜಯ್ ದೇವರಕೊಂಡ 2019ರಲ್ಲಿ ಹೊಸ ಮನೆ ಖರೀದಿಸಿದರು. ಈ ಕಾರ್ಯಕ್ರಮದಲ್ಲಿ ರಶ್ಮಿಕ ಪಾಲ್ಗೊಂಡು ವಿಜಯ್ ಖುಷಿ ಹೆಚ್ಚಿಸಿದ್ದರು.

ಶುಭಾಶಯ ರವಾನೆ:

ವಿಜಯ್ ದೇವರಕೊಂಡ ತಾಯಿಯ ಹುಟ್ಟುಹಬ್ಬಕ್ಕೆ ರಶ್ಮಿಕ ಶುಭಾಶಯ ರವಾನಿಸಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ವಿಜಯ್ ತಾಯಿಗೆ ಐವತ್ತು ವರ್ಷ ತುಂಬಿತ್ತು. ಶುಭಾಶಯ ಕೋರುವ ಕ್ರಿಕೆಟ್ ಶೈಲಿಯ ವಿಡಿಯೋ ರಶ್ಮಿಕ ಹಂಚಿಕೊಂಡಿದ್ದರು.

ಹೊಸ ವರ್ಷಾಚರಣೆ:

ಇವರಿಬ್ಬರೂ ತಮ್ಮ ಒತ್ತಡದ ಶೆಡ್ಯೂಲ್ ನಡುವೆ ಹೊಸ ವರ್ಷದ ಆಚರಣೆಯನ್ನು ಗೋವಾದಲ್ಲಿ ಎದುರುಗೊಂಡಿದ್ದು ವಿಶೇಷ. ವಿಜಯ್ ಸಹೋದರ ಮತ್ತು ಸ್ನೇಹಿತರು ಜೊತೆಯಲ್ಲಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...