ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಭಾರತಕ್ಕೆ ಜವಾದ್ ಚಂಡಮಾರು ಅಪ್ಪಳಿಸಲಿದ್ದು, ಆಂಧ್ರಪ್ರದೇಶ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ಘೋಷಿಸಿದೆ.
ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಚಂಡಮಾರುತ ಭೀತಿ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಕರ್ನಾಟಕದಲ್ಲಿ ಸಂಚರಿಸುವ 12 ರೈಲುಗಳ ಸೇವೆಯನ್ನು ರದ್ದು ಮಾಡುವುದಾಗಿ ನೈಋತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ಇಂದಿನಿಂದ ಡಿ.4ರವರೆಗೆ 12 ರೈಲುಗಳ ಸೇವೆ ಸ್ಥಗಿತಗೊಳಿಸುವುದಾಗಿ ನೈಋತ್ಯ ರೈಲ್ವೆ ವಲಯ ತಿಳಿಸಿದೆ.
ವಾಯು ಮಾಲಿನ್ಯ ಹಿನ್ನಲೆ: ನಾಳೆಯಿಂದ ಎಲ್ಲ ಶಾಲಾ-ಕಾಲೇಜು ಬಂದ್
ಡಿ. 2ರಂದು ರೈಲು ಸಂಖ್ಯೆ 12509 ಬೆಂಗಳೂರು ಕಂಟೋನ್ಮೆಂಟ್ – ಗುವಾಹಟಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ಡಿ. 3ರಂದು ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್ ಪ್ರೆಸ್, ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್ ಪ್ರೆಸ್, ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ, ರೈಲು ಸಂಖ್ಯೆ 12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್, ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್ ಪ್ರೆಸ್, ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್ ಹಾಗೂ ಡಿ. 4ರಂದು ರೈಲು ಸಂಖ್ಯೆ 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ – ಈ 12 ರೈಲು ಸೇವೆಗಳನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದೆ.