alex Certify 45 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸಾದ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

45 ನೇ ವಯಸ್ಸಿನಲ್ಲಿ 10 ನೇ ತರಗತಿ ಪಾಸಾದ ಮಹಿಳೆ….!

ಶಿಕ್ಷಣಕ್ಕೆ ವಯಸ್ಸಿನ ಯಾವುದೇ ಮಿತಿ ಇರುವುದಿಲ್ಲ. ಕಲಿಯುವ ಆಸಕ್ತಿ ಮತ್ತು ಛಲವೊಂದಿದ್ದರೆ ಸಾಕು. ಯಾವುದೇ ವಯಸ್ಸಿನಲ್ಲಿ ಬೇಕಾದರೂ ಶಿಕ್ಷಣವನ್ನು ಪಡೆಯಬಹುದಾಗಿದೆ.

ಇಲ್ಲೊಬ್ಬ ಮಹಿಳೆಗೆ ವಯಸ್ಸು 45. ಕೌಟುಂಬಿಕ ಕಾರಣಗಳಿಂದಾಗಿ 22 ವರ್ಷಗಳ ಹಿಂದೆ ಶಿಕ್ಷಣವನ್ನು ಮೊಟಕುಗೊಳಿಸಿದ್ದರು. ಅಸ್ಸಾಂನ ಈ ಮಹಿಳೆ ಇದೀಗ ತಮ್ಮ 45 ನೇ ವರ್ಷದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಬರೆದು ಉತ್ತೀರ್ಣಳೂ ಆಗಿದ್ದಾರೆ.

ಕಳೆದ 12 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ದುಡಿಯುತ್ತಿರುವ ಮೂರು ಮಕ್ಕಳ ತಾಯಿಯಾಗಿರುವ ಬುಲ್ ಬುಲಿ ಖತುನ್ ಅವರು ಬಿಸ್ವನಾಥ್ ಘಾಟ್ ನ ಫಕ್ರುದ್ದೀನ್ ಅಲಿ ಅಹ್ಮದ್ ಪ್ರೌಢಶಾಲೆಯಲ್ಲಿ 10 ನೇ ತರಗತಿ ಪರೀಕ್ಷೆ ಬರೆದಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಉತ್ತೀರ್ಣಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

BIG NEWS: ಜುಲೈ 1 ರಿಂದ ಸ್ವಚ್ಛತೆ ಸ್ಥಗಿತಗೊಳಿಸಿ ಧರಣಿಗೆ ಮುಂದಾದ ಪೌರ ಕಾರ್ಮಿಕರು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖತುನ್ ಅವರು, ನನ್ನ ಕನಸು ನನಸಾಗಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನಾನು ಮೆಟ್ರಿಕ್ ಪರೀಕ್ಷೆಯನ್ನು ಬರೆಯಬೇಕೆಂದು ಹಲವಾರು ವರ್ಷಗಳಿಂದ ಅಂದುಕೊಂಡಿದ್ದೆ. ಆದರೆ, ಕೌಟುಂಬಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಮದುವೆಯ ನಂತರ ನಾನು ನನ್ನ ಕುಟುಂಬದ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದೆ ಮತ್ತು ನನ್ನ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನನ್ನದಾಗಿತ್ತು. ಆದಾಗ್ಯೂ, ಒಂದಲ್ಲಾ ಒಂದು ದಿನ ನಾನು ಮೆಟ್ರಿಕ್ ಪರೀಕ್ಷೆ ಬರೆಯುತ್ತೇನೆ ಎಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಈ ನಿರ್ಧಾರದೊಂದಿಗೆ ನಾನು ನನಗೆ ಸಮಯ ಸಿಕ್ಕಾಗಲೆಲ್ಲಾ ಓದಲು ಆರಂಭಿಸಿದೆ ಮತ್ತು ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದೆ. ಪರೀಕ್ಷೆಗೆ ನೋಂದಣಿ ಮಾಡಿ ಬರೆದೆ. ನಾನು ಈಗ ಉತ್ತೀರ್ಣಳಾಗಿದ್ದು, ಖುಷಿ ತಂದಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಈ ಮೂಲಕ ಮಧ್ಯ ವಯಸ್ಕ ಮಹಿಳೆ ತನ್ನಂತಹ ಹಲವಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...