ಎಲೆಕ್ಟ್ರಾನಿಕ್ ಮರುಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬ್ರಿಟಿಷ್ ಕಂಪನಿಯು, 1,496 ಮರುಬಳಕೆಯ ವಾಷಿಂಗ್ ಮೆಷಿನ್ ಅನ್ನು 44 ಅಡಿಗಳ ಪಿರಮಿಡ್ ಜೋಡಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದೆ.
44 ಅಡಿ ಮತ್ತು 7 ಇಂಚು ಎತ್ತರದ ಪಿರಮಿಡ್‌ನಲ್ಲಿ ಉಪಕರಣಗಳನ್ನು ಜೋಡಿಸುವ ಮೂಲಕ ಕರ್ರಿಸ್ ಪಿಸಿ ವರ್ಲ್ಡ್ (ಯುಕೆ) ಅತಿದೊಡ್ಡ ವಾಷಿಂಗ್ ಮೆಷಿನ್ ಪಿರಮಿಡ್ ಮಾಡಿದೆ.
ಸ್ಥಳೀಯ ಮಂಡಳಿಗಳು, ಚಿಲ್ಲರೆ ವ್ಯಾಪಾರಿಗಳು, ಉಚಿತ ಸಂಗ್ರಹಣೆ ಮತ್ತು ಡ್ರಾಪ್-ಆಫ್ ಸೇವೆಗಳನ್ನು ನೀಡುತ್ತಿದ್ದರೂ, ಸುಮಾರು ಶೇಕಡಾ 68 ರಷ್ಟು ಬ್ರಿಟಿಷ್ ಜನರಿಗೆ ತಮ್ಮ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಎಲ್ಲಿ ಮತ್ತು ಹೇಗೆ ವಿಲೇವಾರಿ ಮಾಡಬೇಕೆಂಬುದರ ಬಗ್ಗೆ ಗೊಂದಲಗಳಿವೆ ಎಂದು ಕಂಪನಿಯು ನಡೆಸಿದ ಇತ್ತೀಚೆಗಿನ ಸಮೀಕ್ಷೆಯಲ್ಲಿ ಕಂಡುಕೊಂಡಿತ್ತು.
ಈ ಹಿಂದೆ ಸೆಪ್ಟೆಂಬರ್ 2021 ಕರಿಸ್ ಪಿಸಿ ವರ್ಲ್ಡ್, ಅತಿದೊಡ್ಡ ವಾಷಿಂಗ್ ಮೆಷಿನ್ ಪಿರಮಿಡ್‌ಗಾಗಿ ಮೊದಲ ದಾಖಲೆಯನ್ನು ಸ್ಥಾಪಿಸಿತ್ತು. ಹಳೆಯ ಎಲೆಕ್ಟ್ರಾನಿಕ್ ವಸ್ತುಗಳ ಮರುಬಳಕೆ, ದುರಸ್ತಿ ಅಥವಾ ಮರುಹೊಂದಿಸುವ ಯೋಜನೆ ಇದಾಗಿದೆ. ಪಿರಮಿಡ್ ಚೌಕಾಕಾರದ ತಳಹದಿಯನ್ನು ಹೊಂದಿತ್ತು. ಇದರ ಬದಿಗಳು 31 ಅಡಿ 7.5 ಇಂಚುಗಳಷ್ಟು ಅಳತೆಯನ್ನು ಹೊಂದಿದ್ದವು. ಇದು 256 ವಾಷಿಂಗ್ ಮೆಷಿನ್ ಗಳನ್ನು ಒಳಗೊಂಡಿತ್ತು.