alex Certify ಪ್ರಧಾನಿ ಜನ್ಮದಿನದ ಪ್ರಯುಕ್ತ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕ್ಷಣಗಣನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಜನ್ಮದಿನದ ಪ್ರಯುಕ್ತ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕ್ಷಣಗಣನೆ

ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನವಾದ ಇಂದು ಬಿಜೆಪಿ ಕೋವಿಡ್​ ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಮುಂದಾಗಿದೆ. ಹಾಗೂ ಈ ದಾಖಲೆಯನ್ನು ನಿರ್ಮಿಸುವಲ್ಲಿ ಈಗಾಗಲೇ ಭಾಗಶಃ ಯಶಸ್ವಿ ಕೂಡ ಆಗಿದೆ.

ಒಂದು ತಿಂಗಳ ಒಳಗಾಗಿ ನಾಲ್ಕನೇ ಬಾರಿಗೆ ಒಂದೇ ದಿನದಲ್ಲಿ 1 ಕೋಟಿಗೂ ಅಧಿಕ ಮಂದಿಗೆ ಕೊರೊನಾ ಲಸಿಕೆ ನೀಡಿದ ಖ್ಯಾತಿ ದಕ್ಕಿದೆ. ಇಲ್ಲಿಯವರೆಗೆ ದೇಶದಲ್ಲಿ ನೀಡಲಾದ ಲಸಿಕೆಯು 78 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಆರೋಗ್ಯ ಸಚಿವ ಮುನ್ಸುಖ್​ ಮಾಂಡಾವಿಯಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪ್ರಧಾನಿ ಮೋದಿ ಜನ್ಮದಿನವಾದ ಇಂದು ಮಧ್ಯಾಹ್ನ 1.30ರ ಒಳಗಾಗಿ ಈಗಾಗಲೇ 1 ಕೋಟಿ ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಅಲ್ಲದೇ ನಾವು ನಾಗಾಲೋಟದಿಂದ ಮುಂದುವರಿಯುತ್ತಿದ್ದೇವೆ. ನಾವು ಇಂದು ಲಸಿಕೆ ಅಭಿಯಾನದಲ್ಲಿ ಹೊಸ ದಾಖಲೆಯನ್ನು ನಿರ್ಮಿಸುವ ಮೂಲಕ ಪ್ರಧಾನಿ ಮೋದಿಗೆ ಜನ್ಮ ದಿನದ ಉಡುಗೊರೆ ನೀಡುತ್ತೇವೆ ಎಂದು ನಂಬಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್​.ಎಸ್.​ ಶರ್ಮಾ ಕೂಡ ಈ ವಿಚಾರವಾಗಿ ಟ್ವೀಟ್​ ಮಾಡಿದ್ದು, ಕೋವಿಡ್​ 19 ವಿರುದ್ಧ ದೇಶದಲ್ಲಿ ಲಸಿಕೆ ಹಾಕುತ್ತಿರುವವರ ಶ್ರಮವನ್ನು ಕೊಂಡಾಡುತ್ತಾ ನೈಜ ಸಮಯದಲ್ಲಿ ಎಷ್ಟು ಲಸಿಕೆ ಹಾಕಲಾಗಿದೆ ಎಂಬುದನ್ನು ತೋರಿಸಲು ಟಿಕ್ಕರ್​ ಸೇರ್ಪಡೆ ಮಾಡಲಾಗಿದೆ. ಇದರ ಪ್ರಕಾರ ನಾವು ಪ್ರತಿ ನಿಮಿಷಕ್ಕೆ 42 ಸಾವಿರ ಹಾಗೂ ಪ್ರತಿ ಸೆಕೆಂಡ್​ಗೆ 700 ಲಸಿಕೆಗಳನ್ನು ಹಾಕುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್​ 6, ಆಗಸ್ಟ್​ 31 ಹಾಗೂ ಆಗಸ್ಟ್​ 27ರಂದು ದೇಶದಲ್ಲಿ ಕೊರೊನಾ ಲಸಿಕೆಯು 1 ಕೋಟಿ ಗಡಿ ದಾಟಿದೆ. ಇಂದು ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಒಂದೇ ದಿನದಲ್ಲಿ 2 ಕೋಟಿ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

— Dr. RS Sharma (@rssharma3) September 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...