alex Certify 20 ವರ್ಷದ ವಿದ್ಯಾರ್ಥಿನಿ ಮದ್ವೆಯಾದ 42ರ ವಿಧುರ ಶಿಕ್ಷಕ: ನೆಟ್ಟಿಗರ ಆಕ್ಷೇಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷದ ವಿದ್ಯಾರ್ಥಿನಿ ಮದ್ವೆಯಾದ 42ರ ವಿಧುರ ಶಿಕ್ಷಕ: ನೆಟ್ಟಿಗರ ಆಕ್ಷೇಪ

ವರನಿಗೆ 42 ವರ್ಷ ವಯಸ್ಸು. ವಧುವಿಗೆ 20 ವರ್ಷ. ಇವರಿಬ್ಬರ ಮದುವೆಯಾಗಿದ್ದು, ಇದೀಗ ಭಾರಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಏನೆಂದರೆ ವರ ಶಿಕ್ಷಕ ಹಾಗೂ ವಧು ಈತನದ್ದೇ ವಿದ್ಯಾರ್ಥಿನಿ. ಶಿಕ್ಷಕ ಹಾಗೂ ವಿದ್ಯಾರ್ಥಿನಿಯ ಮದುವೆಯ ಬಗ್ಗೆ ಹಲವರು ಹಲವು ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಯುವತಿ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ವ್ಯಕ್ತಿಯ ಕೋಚಿಂಗ್ ವಿದ್ಯಾರ್ಥಿನಿ. ಶಿಕ್ಷಕನಾಗಿರುವ ಮತುಕ್ನಾಥ್​ನ ಮೊದಲ ಪತ್ನಿ ತೀರಿಕೊಂಡಿದ್ದಾಳೆ. ಅದಕ್ಕಾಗಿ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾನೆ!

22 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ಇವರಿಬ್ಬರು ಮದುವೆಯಾಗಿರುವ ವಿಡಿಯೋ ಅನ್ನು ಒಬ್ಬರು ಶೇರ್​ ಮಾಡಿದ್ದು, ಬಹಳ ಚರ್ಚೆಗೆ ಕಾರಣವಾಗುತ್ತಿದೆ. ಅಂದಹಾಗೆ ಇದು ಲವ್​ ಮ್ಯಾರೇಜ್​ ಅಂತೆ. ವಿದ್ಯಾರ್ಥಿನಿ ಶಿಕ್ಷಕನನ್ನು ಪ್ರೀತಿಸಿರುವುದಾಗಿ ಹೇಳಲಾಗುತ್ತಿದೆ. ದೇವಸ್ಥಾನವೊಂದರಲ್ಲಿ ಈ ಮದುವೆ ನಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...