ವರನಿಗೆ 42 ವರ್ಷ ವಯಸ್ಸು. ವಧುವಿಗೆ 20 ವರ್ಷ. ಇವರಿಬ್ಬರ ಮದುವೆಯಾಗಿದ್ದು, ಇದೀಗ ಭಾರಿ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಏನೆಂದರೆ ವರ ಶಿಕ್ಷಕ ಹಾಗೂ ವಧು ಈತನದ್ದೇ ವಿದ್ಯಾರ್ಥಿನಿ. ಶಿಕ್ಷಕ ಹಾಗೂ ವಿದ್ಯಾರ್ಥಿನಿಯ ಮದುವೆಯ ಬಗ್ಗೆ ಹಲವರು ಹಲವು ರೀತಿಯಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಯುವತಿ ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ವ್ಯಕ್ತಿಯ ಕೋಚಿಂಗ್ ವಿದ್ಯಾರ್ಥಿನಿ. ಶಿಕ್ಷಕನಾಗಿರುವ ಮತುಕ್ನಾಥ್ನ ಮೊದಲ ಪತ್ನಿ ತೀರಿಕೊಂಡಿದ್ದಾಳೆ. ಅದಕ್ಕಾಗಿ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದಾನೆ!
22 ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿರುವ ಇವರಿಬ್ಬರು ಮದುವೆಯಾಗಿರುವ ವಿಡಿಯೋ ಅನ್ನು ಒಬ್ಬರು ಶೇರ್ ಮಾಡಿದ್ದು, ಬಹಳ ಚರ್ಚೆಗೆ ಕಾರಣವಾಗುತ್ತಿದೆ. ಅಂದಹಾಗೆ ಇದು ಲವ್ ಮ್ಯಾರೇಜ್ ಅಂತೆ. ವಿದ್ಯಾರ್ಥಿನಿ ಶಿಕ್ಷಕನನ್ನು ಪ್ರೀತಿಸಿರುವುದಾಗಿ ಹೇಳಲಾಗುತ್ತಿದೆ. ದೇವಸ್ಥಾನವೊಂದರಲ್ಲಿ ಈ ಮದುವೆ ನಡೆದಿದೆ.