alex Certify ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆಯಾಗಿದ್ದ ಕೇಸ್: ಗುತ್ತಿಗೆದಾರ ಅಂಬಿಕಾಪತಿ ಹೃದಯಾಘಾತದಿಂದ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಟಿ ದಾಳಿ ವೇಳೆ 42 ಕೋಟಿ ರೂ. ಪತ್ತೆಯಾಗಿದ್ದ ಕೇಸ್: ಗುತ್ತಿಗೆದಾರ ಅಂಬಿಕಾಪತಿ ಹೃದಯಾಘಾತದಿಂದ ನಿಧನ

ಬೆಂಗಳೂರು: ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಂಜೆ 6:40ರ ಸುಮಾರಿಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಅಂಬಿಕಾಪತಿ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಅಂಬಿಕಾ ಪತಿ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು. ಅಂಬಿಕಾ ಪತಿ ಮನೆಯಲ್ಲಿ 42 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು.

ಬಿಬಿಎಂಪಿ ಮಾಜಿ ಸದಸ್ಯೆ ಅಶ್ವತ್ಥಮ್ಮ ಅವರ ಪತಿ ಅಂಬಿಕಾಪತಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದು, ಅವರ ನಿವಾಸದಲ್ಲಿ 42 ಕೋಟಿ ರೂ. ಪತ್ತೆಯಾಗಿತ್ತು. ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...