alex Certify ಶೇ.40 ಭಾರತೀಯರಲ್ಲಿ ಶುದ್ಧ ಅಡುಗೆ ಇಂಧನ ಇಲ್ಲ, ಶೇ.20 ರಷ್ಟು ಜನರಿಂದ ಇನ್ನೂ ಬಯಲುಶೌಚ ಬಳಕೆ; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ.40 ಭಾರತೀಯರಲ್ಲಿ ಶುದ್ಧ ಅಡುಗೆ ಇಂಧನ ಇಲ್ಲ, ಶೇ.20 ರಷ್ಟು ಜನರಿಂದ ಇನ್ನೂ ಬಯಲುಶೌಚ ಬಳಕೆ; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಇನ್ನು ಕೂಡ ಶೇಕಡ 40ಕ್ಕಿಂತ ಹೆಚ್ಚು ಭಾರತೀಯರು ಅಡುಗೆಗೆ ಶುದ್ಧ ಇಂಧನವನ್ನು ಹೊಂದಿಲ್ಲ. ಇದೇ ರೀತಿ, ಶೇಕಡ 20ರಷ್ಟು ಭಾರತೀಯರು ಬಯಲು ಶೌಚ ಮುಂದುವರಿಸಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ರಾಕುಆಸ)ಯ ಇತ್ತೀಚಿನ ವರದಿ ಹೇಳಿದೆ. ಈ ವರದಿಯು ದೇಶದ ಸಾಮಾಜಿಕ-ಆರ್ಥಿಕ ವಾಸ್ತವಗಳ ಇಣುಕುನೋಟವನ್ನು ನೀಡುತ್ತದೆ.

ಈ ವರದಿ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 57 ಜನರಿಗೆ ಎಲ್‌ಪಿಜಿ, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಬಳಸಿ ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ಪ್ರದೇಶದಲ್ಲಿ ಶೇಕಡ 26 ಜನರು ಬಯಲು ಶೌಚ ಮುಂದುವರಿಸಿದ್ದಾರೆ. ಹಾಗೆಯೇ, ಗ್ರಾಮಾಂತರದಲ್ಲಿ ಶೇಕಡ 56 ಜನರು ಕಲ್ಲಿದ್ದಲು, ಮರ, ಇದ್ದಿಲು ಮತ್ತು ಸಗಣಿ ಕೇಕ್‌ಗಳನ್ನು ಅಡುಗೆ ಬೆಂಕಿಗೆ ಬಳಸುತ್ತಾರೆ. ಬಹುತೇಕರು ತಾವು ವಾಸಿಸುವ ಕೋಣೆಯಲ್ಲಿಯೇ ಅಡುಗೆ ಮಾಡುತ್ತಾರೆ. ಇದು ಮನೆಯ ಪ್ರತಿಯೊಬ್ಬ ಸದಸ್ಯರನ್ನು ಹಾನಿಕಾರಕ ಹೊಗೆಗೆ ಒಡ್ಡುತ್ತದೆ. ಗ್ರಾಮೀಣ ಭಾರತದಲ್ಲಿ ಶೇಕಡ 27 ಕ್ಕಿಂತ ಹೆಚ್ಚು ಮನೆಗಳಲ್ಲಿ ಅಡುಗೆ ಮಾಡಲು ಪ್ರತ್ಯೇಕ ಕೊಠಡಿ ಇಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಬ್ಯಾಗ್ ವೆಂಡಿಂಗ್ ಮಶಿನ್ ಅಳವಡಿಸಿದ ಐಎಎಸ್ ಅಧಿಕಾರಿ

ಜನರು ತಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂತಹ ಮನೆಯ ಹೊಗೆಯನ್ನು ಉಸಿರಾಡುವುದನ್ನು ತಡೆಯಲು ನರೇಂದ್ರ ಮೋದಿ ಸರ್ಕಾರವು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು. ಇದು 8 ಕೋಟಿ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಮತ್ತು ಒಂದು ಸಿಲಿಂಡರ್ ಒದಗಿಸಿದೆ.

ಆರು ವರ್ಷಗಳ ಕೆಳಗೆ, NFHS-5 ಸಮೀಕ್ಷೆಯ ಪ್ರಕಾರ ದೇಶದಲ್ಲಿ ಶೇಕಡ 58 ಎಲ್‌ಪಿಜಿ ಸಂಪರ್ಕ ತೋರಿಸಿತ್ತು. ಆದರೆ ಹಳ್ಳಿಗಳಲ್ಲಿ, ಕೇವಲ ಶೇಕಡ 42 ಕುಟುಂಬಗಳು ಮಾತ್ರ ಎಲ್‌ಪಿಜಿ ಅಥವಾ ನೈಸರ್ಗಿಕ ಅನಿಲವನ್ನು ಅಡುಗೆಗಾಗಿ ಬಳಸುತ್ತವೆ. ಗ್ರಾಮೀಣ ಭಾರತದ ಆದ್ಯತೆಯ ಇಂಧನವು ಮರವಾಗಿದ್ದು, 44 ಪ್ರತಿಶತ ಕುಟುಂಬಗಳು ಇದನ್ನು ಬಳಸುತ್ತಿವೆ. ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ನಿಗದಿಪಡಿಸಿದ ಗುರಿಯನ್ನು ಆಗಸ್ಟ್ 2019 ರಲ್ಲಿ ಸಾಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ನಂತರ ಅದನ್ನು ಹೆಚ್ಚುವರಿಯಾಗಿ ಒಂದು ಕೋಟಿ ಕುಟುಂಬಗಳನ್ನು ಸೇರಿಸಲು ವಿಸ್ತರಿಸಲಾಗಿತ್ತು. ಆದಾಗ್ಯೂ, ಕುಟುಂಬಗಳು ಮೊದಲ ಉಚಿತ ಸಿಲಿಂಡರ್‌ಗಳನ್ನು ರೀಫಿಲ್ ಮಾಡಲು ದುಬಾರಿ ದರದ ಕಾರಣ ಸಾಧ್ಯವಾಗುತ್ತಿಲ್ಲ ಎಂಬ ವರದಿಗಳಿವೆ.

ಬಯಲು ಶೌಚದ ಕಥೆಯೂ ಸ್ವಲ್ಪ ಮಟ್ಟಿಗೆ ಇದೇ ಆಗಿದೆ. 2019-21 ರಲ್ಲಿ ಬಯಲು ಶೌಚವನ್ನು ಅಭ್ಯಾಸ ಮಾಡುವ ಕುಟುಂಬಗಳ ಶೇಕಡಾವಾರು ಶೇಕಡಾ 19 ರಷ್ಟಿದೆ, ಇದು 2015-16 ರಲ್ಲಿ ಶೇಕಡಾ 39 ರಿಂದ ಸುಧಾರಣೆಯಾಗಿದೆ. ಸುಧಾರಣೆಯ ಹೊರತಾಗಿಯೂ, ಗ್ರಾಮೀಣ ಭಾರತದಲ್ಲಿ ಶೇಕಡಾ 26 ರಷ್ಟು ಮನೆಗಳಲ್ಲಿ ಬಯಲು ಶೌಚವನ್ನು ಅಭ್ಯಾಸ ಮುಂದುವರಿದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...