alex Certify ಕಾಲುವೆಗೆ ಬಿದ್ದ ಕಾರ್: ಒಂದೇ ಕುಟುಂಬದ ನಾಲ್ವರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲುವೆಗೆ ಬಿದ್ದ ಕಾರ್: ಒಂದೇ ಕುಟುಂಬದ ನಾಲ್ವರು ಸಾವು

ಅಂಬಾಲಾ: ಹರಿಯಾಣದ ಅಂಬಾಲಾ ಜಿಲ್ಲೆಯಲ್ಲಿ ಕಾರ್ ಕಾಲುವೆಗೆ ಬಿದ್ದ ಪರಿಣಾಮ ಪಂಜಾಬ್ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಅಂಬಾಲಾ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಇಸ್ಮಾಯಿಲ್‌ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ನಂತರ ಮೃತದೇಹಗಳನ್ನು ನರ್ವಾನಾ ಶಾಖಾ ಕಾಲುವೆಯಿಂದ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕುಲದೀಪ್ ಸಿಂಗ್(48), ಅವರ ಪತ್ನಿ ಕುಲ್ಬೀರ್ ಕೌರ್(40), ಪುತ್ರ ಸುಖಪ್ರೀತ್(15) ಮತ್ತು ಪುತ್ರಿ ಜಶ್ನ್‌ದೀಪ್ ಕೌರ್(10) ಎಂದು ಗುರುತಿಸಲಾಗಿದೆ.

ಕುಲದೀಪ್ ಸಿಂಗ್ ಪಂಜಾಬ್‌ನ ತಿವಾನಾ ಗ್ರಾಮದಿಂದ(ಲಾಲ್ರು ಬಳಿ) ತನ್ನ ಕುಟುಂಬದ ಸದಸ್ಯರೊಂದಿಗೆ ಕಾರ್ ನಲ್ಲಿ ಅಂಬಾಲಾ ಕಡೆಗೆ ಹೋಗುತ್ತಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...