alex Certify ಮನುಕುಲವೇ ತಲೆತಗ್ಗಿಸುವಂತಿದೆ ಈ ಪೈಶಾಚಿಕ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಕುಲವೇ ತಲೆತಗ್ಗಿಸುವಂತಿದೆ ಈ ಪೈಶಾಚಿಕ ಕೃತ್ಯ

ಮನುಕುಲ ತಲೆತಗ್ಗಿಸುವ ಘಟನೆಯೊಂದರಲ್ಲಿ, 60 ವರ್ಷದ ಮಹಿಳೆಯೊಬ್ಬರ ಮೇಲೆ ನಾಲ್ವರು ಕ್ರೂರಿಗಳು ಬರ್ಬರವಾಗಿ ಅತ್ಯಾಚಾರಗೈದು ಆಕೆಯ ಗುಪ್ತಾಂಗಗಳಿಗೆ ಒಣಮೆಣಸಿನಕಾಯಿ ಹಾಕಿ ಆಕೆಯನ್ನು ಪೊದೆಗಳ ಒಳಗೆ ಬಿಟ್ಟು ಹೋಗಿದ್ದಾರೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕಬ್ರಾಯ್ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ನಿದ್ರೆಯಲ್ಲಿದ್ದ ಹಿರಿಯ ಮಹಿಳೆಯನ್ನು ಹಂತಕರು ಎಳೆದೊಯ್ದು ಅತ್ಯಾಚಾರಗೈದಿದ್ದಾರೆ.

ಸದುದ್ದೇಶಕ್ಕಾಗಿ ವಿಶಿಷ್ಟ ದೋಣಿಯಲ್ಲಿ ಹೊರಟ ಸಾಹಸಿ

ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಅಪರಾಧದ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಮಹಿಳೆಗೆ ಬೆದರಿಕೆಯೊಡ್ಡಿದ್ದಾರೆ ಪಾಪಿಗಳು.

ಮರುದಿನ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಕಂಡುಬಂದ ಸಂತ್ರಸ್ತೆಯನ್ನು ಆಕೆಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪೊಲೀಸರಿಗೆ ಹೇಳಿಕೆ ಕೊಟ್ಟ ಸಂತ್ರಸ್ತೆ, ತನ್ನ ಪಕ್ಕದ ಮನೆಯ ಇಬ್ಬರು ಪುರುಷರು ಅಪರಾಧಗೈದಿದ್ದಾರೆ ಎಂದು ಹೇಳಿದ್ದು, ತನ್ನ ಮನೆ ಹಾಗೂ ಜಮೀನನ್ನು ಬಿಟ್ಟು ಹೋಗಲು ತನ್ನ ಮೇಲೆ ಒತ್ತಡ ಹೇರಿದ್ದಾಗಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮಹಿಳೆಯ ಪಕ್ಕದ ಮನೆಯ ಇಬ್ಬರನ್ನು ಬಂಧಿಸಿರುವ ಪೊಲೀಸರು ಮಿಕ್ಕವರ ಸೆರೆಗೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...