alex Certify ವರನೊಂದಿಗೆ ಕುಟುಂಬ ಸದಸ್ಯರು ತೆರಳುತ್ತಿದ್ದ ಜೀಪ್ ಟ್ರಕ್ ಗೆ ಡಿಕ್ಕಿ: 4 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನೊಂದಿಗೆ ಕುಟುಂಬ ಸದಸ್ಯರು ತೆರಳುತ್ತಿದ್ದ ಜೀಪ್ ಟ್ರಕ್ ಗೆ ಡಿಕ್ಕಿ: 4 ಜನ ಸಾವು

ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯ ಆಗ್ರಾ-ಜೈಪುರ ಹೆದ್ದಾರಿಯಲ್ಲಿ ಶನಿವಾರ ವರ ಮತ್ತು ಅವರ ಕುಟುಂಬ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಜೀಪ್ ಟ್ರಕ್‌ಗೆ ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಆಗ್ರಾ-ಜೈಪುರ ಹೆದ್ದಾರಿಯ ಕೊರೈ ಟೋಲ್ ಪ್ಲಾಜಾದಲ್ಲಿ ಜೀಪ್ ಚಾಲಕ ಚಾಲನೆ ಮಾಡುವಾಗ ನಿದ್ರೆಗೆ ಜಾರಿದ ನಂತರ ಈ ಅಪಘಾತ ಸಂಭವಿಸಿದೆ. ಸ್ಥಳೀಯರು ಮತ್ತು ಟೋಲ್ ಪ್ಲಾಜಾ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಾಜಸ್ಥಾನದ ಅಜ್ಮೀರ್‌ನಿಂದ ಬಿಹಾರದ ಪಾಟ್ನಾಗೆ ಮದುವೆಯ ತಂಡವನ್ನು ಹೊತ್ತೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಜೀಪ್ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಆಗ್ರಾ ಪೊಲೀಸ್ ವರಿಷ್ಠಾಧಿಕಾರಿ(ಪಶ್ಚಿಮ) ಸತ್ಯಜೀತ್ ಗುಪ್ತಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...