alex Certify ವಂಚಕ ಸುಕೇಶ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಜೈಲಿನಿದ್ದಾಗಲೂ ಭೇಟಿ ಮಾಡಿದ್ದ ನಾಲ್ವರು ನಟಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚಕ ಸುಕೇಶ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಜೈಲಿನಿದ್ದಾಗಲೂ ಭೇಟಿ ಮಾಡಿದ್ದ ನಾಲ್ವರು ನಟಿಯರು

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರನ್ ಕುರಿತು ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಈ ವಿಚಾರಗಳು ಬೆಳಕಿಗೆ ಬಂದಿವೆ.

ಸುಕೇಶ್ ಚಂದ್ರಶೇಖರನ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗ ಬಿಗ್ ಬಾಸ್ ಖ್ಯಾತಿಯ ನಟಿ ನಿಕಿತಾ ತಂಬೊಳೆ, ನಟಿಯರಾದ ಚಹತ್ ಖನ್ನಾ, ಸೋಫಿಯಾ ಸಿಂಗ್ ಮತ್ತು ಅರುಷಾ ಪಾಟೀಲ್ ಭೇಟಿಯಾಗಿದ್ದು, ಇಂಟರೆಸ್ಟಿಂಗ್ ಸಂಗತಿ ಎಂದರೆ ಈ ಭೇಟಿ ಸಂದರ್ಭದಲ್ಲಿ ಸುಕೇಶ್ ಲಕ್ಷ ಲಕ್ಷ ಹಣ, ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡಿದ್ದಾನೆ.

ಮುಂಬೈನಿಂದ ಇವರುಗಳು ದೆಹಲಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಲ್ಲದೆ ತಂಗಲು ಪಂಚತಾರ ಹೋಟೆಲ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಜೊತೆಗೆ ಓಡಾಡಲು ಬಿಎಂಡಬ್ಲ್ಯೂ ಕಾರ್ ವ್ಯವಸ್ಥೆ, ಜೊತೆಗೆ ಜೈಲ್ ಗೆಟಿನಿಂದ ಒಳಗೆ ಕರೆದುಕೊಂಡು ಹೋಗಲು ಇನ್ನೋವಾ ಕಾರ್ ವ್ಯವಸ್ಥೆ ಮಾಡಲಾಗಿದ್ದು ಜೈಲಾಧಿಕಾರಿಗಳ ಸಹಕಾರದಿಂದಲೇ ಇದೆಲ್ಲ ನಡೆದಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...