ಬೆಂಗಳೂರು: ನಾಲ್ವರು ಕಾಲೇಜು ಸ್ನೇಹಿತರು ನಗರದಲ್ಲಿ ಬಟ್ಟೆ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದಾರೆ. ಅಲ್ಲಿ ಬಡ ಮತ್ತು ನಿರ್ಗತಿಕರು ತಮ್ಮ ಆಯ್ಕೆಯ ಯಾವುದೇ ಪ್ರತಿ ಉಡುಪನ್ನು 1 ರೂಪಾಯಿಗೆ ಖರೀದಿಸಬಹುದು.
ಇಮ್ಯಾಜಿನ್ ಕ್ಲೋತ್ಸ್ ಬ್ಯಾಂಕ್ ಎಂಬ ಮಳಿಗೆಯನ್ನು 2021ರ ಸೆಪ್ಟೆಂಬರ್ ನಲ್ಲಿ, ಎಲೆಕ್ಟ್ರಾನಿಕ್ಸ್ ಸಿಟಿಯ ಲವ ಕುಶಾ ಲೇಔಟ್‌ನ ಅಪಾರ್ಟ್ಮೆಂಟ್ ನಲ್ಲಿ ಅನಾವರಣಗೊಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸುತ್ತಮುತ್ತಲಿನ ಸುಮಾರು 30 ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದ ಬಟ್ಟೆಗಳನ್ನು ಕೊಡುಗೆಯಾಗಿ ನೀಡಲಾಗಿದೆ
ಸೀರೆಗಳು, ಪ್ಯಾಂಟ್‌ಗಳು, ಶರ್ಟ್‌ಗಳು, ಜಾಕೆಟ್‌ಗಳು ಸೇರಿದಂತೆ ಎಲ್ಲಾ ರೀತಿಯ ಬಟ್ಟೆಗಳನ್ನು ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗಿದೆ. ಗಾತ್ರ, ವಯಸ್ಸಿಗಣುಗುನಾವಾಗಿ ಬಟ್ಟೆಗಳನ್ನು ಜೋಡಿಸಲಾಗಿದೆ.
ಮದುವೆ ದಿನದಂದು ವರನಿಗೆ ಸರ್ಫ್ರೈಸ್ ನೀಡಿದ ಸ್ನೇಹಿತರು
ಈ ಅಂಗಡಿಯಲ್ಲಿರುವ ಎಲ್ಲಾ ವಸ್ತುಗಳ ಬೆಲೆ ಕೇವಲ 1 ರೂ. ಹಾಗೂ ಗ್ರಾಹಕರು ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಅಲ್ಲದೆ, ಮಾರಾಟದಿಂದ ಬಂದಂತಹ ಹಣವನ್ನು ಅಗತ್ಯವಿರುವ ಕುಟುಂಬಗಳ ಶೈಕ್ಷಣಿಕ ಅಥವಾ ವೈದ್ಯಕೀಯ ಅಗತ್ಯಗಳಿಗಾಗಿ ಬಳಸಲಾಗುತ್ತದೆ.
ಮೆಲಿಶಾ ನೊರೊನ್ಹಾ, ಅವರ ಪತಿ ವಿನೋದ್ ಲೋಬೊ, ಅವರ ತಾಯಿ ಗ್ಲಾಡಿಸ್ ಮತ್ತು ಅವರ ಇಬ್ಬರು ಸ್ನೇಹಿತರಾದ ನಿತಿನ್ ಕುಮಾರ್ ಮತ್ತು ವಿಘ್ನೇಶ್ ಅವರು 2013 ರಲ್ಲಿ ಟ್ರಸ್ಟ್ ಅನ್ನು ಪ್ರಾರಂಭಿಸಿದ್ದಾರೆ.